ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಸಿ: ಚೀನಾದ ವ್ಯಾಖ್ಯಾನ ತಿರಸ್ಕರಿಸಿದ ಭಾರತ

ಏಕಪಕ್ಷೀಯವಾದ 1959ರ ಎಲ್‌ಎಸಿಯನ್ನು ಭಾರತ ಒಪ್ಪಿಕೊಂಡಿಲ್ಲ: ವಿದೇಶಾಂಗ ಇಲಾಖೆ
Last Updated 30 ಸೆಪ್ಟೆಂಬರ್ 2020, 2:56 IST
ಅಕ್ಷರ ಗಾತ್ರ

ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಗ್ರಹಿಕೆಯ ಕುರಿತು 1959ರಲ್ಲಿ ತೆಗೆದುಕೊಂಡ ನಿಲುವಿಗೆ ತಾವು ಬದ್ಧ ಎಂದಿರುವ ಚೀನಾದ ಹೇಳಿಕೆಯನ್ನು ಭಾರತವು ಮಂಗಳವಾರ ತಿರಸ್ಕರಿಸಿದೆ. ಗಡಿಯ ಕುರಿತು ಒಪ್ಪಲಾಗದ ಏಕಪಕ್ಷೀಯವಾದ ವ್ಯಾಖ್ಯಾನವನ್ನು ಮುಂದುವರಿಸದಂತೆ ಚೀನಾಗೆ ಭಾರತ ಸೂಚಿಸಿದೆ.

‘ಅಂದು ಪ್ರಧಾನಿಯಾಗಿದ್ದ ಜು ಎನ್‌ಲಾಯ್‌ ಅವರು1959ರ ನ.7ರಂದು ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಬರೆದಿದ್ದ ಪತ್ರದಲ್ಲಿ ಪ್ರಸ್ತಾಪಿಸಿದ್ದ ಎಲ್‌ಎಸಿಗೆ ಚೀನಾ ಬದ್ಧ’ ಎಂದುಇತ್ತೀಚೆಗೆ ಚೀನಾದ ವಿದೇಶಾಂಗ ಇಲಾಖೆ ವಕ್ತಾರರೊಬ್ಬರು ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆಗೆ ಹೇಳಿಕೆ ನೀಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದವಿದೇಶಾಂಗ ಇಲಾಖೆ ವಕ್ತಾರ ಅನುರಾಗ್‌ ಶ್ರೀವಾಸ್ತವ‌,‘ಏಕಪಕ್ಷೀಯವಾಗಿ ಗೊತ್ತುಮಾಡಿದ 1959ರ ಎಲ್‌ಎಸಿಯನ್ನು ಭಾರತ ಒಪ್ಪಿಕೊಂಡಿಲ್ಲ. ಈ ನಿರ್ಧಾರಕ್ಕೆ ಭಾರತ ಬದ್ಧವಾಗಿದೆ ಹಾಗೂ ಈ ವಿಚಾರ ಚೀನಾ ಸೇರಿದಂತೆ ಎಲ್ಲರಿಗೂ ತಿಳಿದಿದೆ’ ಎಂದರು.

ಎಲ್‌ಎಸಿಯುದ್ದಕ್ಕೂ ಶಾಂತಿ ಕಾಪಾಡುವ ಉದ್ದೇಶದಿಂದ 1993ರಲ್ಲಿ ಮಾಡಿಕೊಂಡ ಒಪ್ಪಂದ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ 2005ರಲ್ಲಿ ಮಾಡಿಕೊಂಡ ಒಪ್ಪಂದವನ್ನು ಉಲ್ಲೇಖಿಸಿದ ಶ್ರೀವಾಸ್ತವ, ಎಲ್‌ಎಸಿ ಕುರಿತು ಸಮಾನವಾದ ಒಡಂಬಡಿಕೆಗೆ ಬರಲು ಎರಡೂ ರಾಷ್ಟ್ರಗಳು ಬದ್ಧತೆ ಪ್ರದರ್ಶಿಸಿದ್ದವು ಎಂದರು. ‘ಇಂಥ ಸಂದರ್ಭದಲ್ಲಿ ಚೀನಾ ಒಂದೇ ಎಲ್‌ಎಸಿ ಎನ್ನುತ್ತಿರುವುದು, ಈ ಒಪ್ಪಂದಗಳಲ್ಲಿ ಚೀನಾದ ಬದ್ಧತೆಗೆ ವಿರುದ್ಧವಾಗಿದೆ. ಭಾರತ ಎಲ್‌ಎಸಿಯನ್ನು ಗೌರವಿಸುತ್ತಾ ಬಂದಿದೆ ಹಾಗೂ ಇದಕ್ಕೆ ಬದ್ಧವಾಗಿದೆ’ ಎಂದು ಶ್ರೀವಾಸ್ತವ ತಿಳಿಸಿದರು.

‘ಹಲವೆಡೆ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಪ್ರಯತ್ನಿಸಿದ ಚೀನಾವುಎಲ್‌ಎಸಿಯನ್ನು ಅತಿಕ್ರಮಿಸಲು ಯತ್ನಿಸಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT