ಶುಕ್ರವಾರ, ಡಿಸೆಂಬರ್ 2, 2022
23 °C

ಚೀನಾ ಗಡಿಯಲ್ಲಿ 50,000 ಹೆಚ್ಚುವರಿ ಸೇನೆ ನಿಯೋಜಿಸಿದ ಭಾರತ

ಬ್ಲೂಮ್‌ಬರ್ಗ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಚೀನಾ ಗಡಿಯಲ್ಲಿ ಭಾರತವು ಕನಿಷ್ಠ 50,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. 

1962 ರಲ್ಲಿ ಉಭಯ ದೇಶಗಳುಕಾದಾಡಿದ್ದರೂ ಸಹ, ಬ್ರಿಟಿಷರು ಉಪಖಂಡವನ್ನು ತೊರೆದಾಗಿನಿಂದ ಭಾರತದ ಕಾರ್ಯತಂತ್ರದ ಗಮನವು ಮುಖ್ಯವಾಗಿ ಪಾಕಿಸ್ತಾನವಾಗಿದೆ. ಕಾಶ್ಮೀರಕ್ಕಾಗಿ ಯುದ್ಧಗಳು ನಡೆದಿವೆ. ಆದರೆ, ಕಳೆದ ವರ್ಷ ಲಡಾಖ್‌ನಲ್ಲಿ ನಡೆದ ಭೀಕರ ಭಾರತ-ಚೀನಾ ಯೋಧರ ಘರ್ಷಣೆ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವು ಚೀನಾ ಗಡಿಯತ್ತ ಗಮನ ಕೇಂದ್ರೀಕರಿಸಿದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಭಾರತವು ಸೇನೆ ಮತ್ತು ಫೈಟರ್ ಜೆಟ್ ಸ್ಕ್ವಾಡ್ರನ್‌ಗಳನ್ನು ಚೀನಾದೊಂದಿಗಿನ ತನ್ನ ಗಡಿಯ ಮೂರು ವಿಭಿನ್ನ ಪ್ರದೇಶಗಳಿಗೆ ಸ್ಥಳಾಂತರಿಸಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಭಾರತವು ಈಗ ಚೀನಾ ಗಡಿಯಲ್ಲಿ ಸುಮಾರು 2,00,000 ಸೈನಿಕರನ್ನುಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 40 ಕ್ಕಿಂತ ಹೆಚ್ಚಾಗಿದೆ.

ಭಾರತೀಯ ಸೇನೆ ಮತ್ತು ನವದೆಹಲಿಯ ಪ್ರಧಾನ ಮಂತ್ರಿ ಕಚೇರಿಯ ವಕ್ತಾರರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಈ ಹಿಂದೆ ಭಾರತದ ಮಿಲಿಟರಿಯು ಚೀನಾದ ನಡೆಗಳನ್ನು ತಡೆಯುವ ಗುರಿಯನ್ನು ಹೊಂದಿತ್ತು. , ಇದಿಗ, ಹೆಚ್ಚಿನ ಸೇನೆ ಜಮಾವಣೆ ಬಳಿಕ ‘ಆಕ್ರಮಣಕಾರಿ ರಕ್ಷಣೆ’ ಎಂದು ಕರೆಯಲ್ಪಡುವ ಕಾರ್ಯತಂತ್ರದಲ್ಲಿ ಅಗತ್ಯಬಿದ್ದರೆ ಚೀನಾದ ಭೂಪ್ರದೇಶವನ್ನು ಆಕ್ರಮಿಸಲು ಮತ್ತು ವಶಪಡಿಸಿಕೊಳ್ಳಲು ಭಾರತೀಯ ಕಮಾಂಡರ್‌ಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ ಎಂದು ಮೂಲಗಳು ತಿಳಿಸಿವೆ. ಗಡಿಯಲ್ಲಿ ಯೋಧರನ್ನು ಏರ್‌ಲಿಫ್ಟ್‌ ಮಾಡಲು ಹೆಲಿಕಾಪ್ಟರ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಜಮಾವಣೆ ಮಾಡಲಾಗಿದೆ.

ಗಡಿಯಲ್ಲಿ ಚೀನಾ ಎಷ್ಟು ಸೈನಿಕರನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಪೀಪಲ್ಸ್ ಲಿಬರೇಶನ್ ಆರ್ಮಿ ಇತ್ತೀಚೆಗೆ ಹೆಚ್ಚುವರಿ ಪಡೆಗಳನ್ನು ಟಿಬೆಟ್‌ನಿಂದ ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡ್‌ಗೆ ಸ್ಥಳಾಂತರಿಸಿದೆ ಎಂದು ಗೊತ್ತಾಗಿದೆ. ಇದು ಹಿಮಾಲಯದ ಉದ್ದಕ್ಕೂ ವಿವಾದಿತ ಪ್ರದೇಶಗಳಲ್ಲಿ ಗಸ್ತು ತಿರುಗುವ ಕಾರ್ಯ ನಿರ್ವಹಿಸುತ್ತದೆ. ಚೀನಾದ ಹೊಸ ರನ್‌ವೇ ಕಟ್ಟಡಗಳು, ಟಿಬೆಟ್‌ನ ವಿವಾದಿತ ಗಡಿಯಲ್ಲಿ ಚೀನಾವು ಹೌಸ್ ಫೈಟರ್ ಜೆಟ್‌ಗಳಿಗೆ ಬಾಂಬ್ ನಿರೋಧಕ ಬಂಕರ್‌ಗಳು ಮತ್ತು ಹೊಸ ವಾಯುನೆಲೆಗಳನ್ನು ನಿರ್ಮಿಸುತ್ತಿದೆ ಎಂದು ಮೂಲಗಳು ಹೇಳಿವೆ. ಕಳೆದ ಕೆಲವು ತಿಂಗಳುಗಳಿಮದ ಚೀನಾ, ದೀರ್ಘ-ಶ್ರೇಣಿಯ ಫಿರಂಗಿ, ಟ್ಯಾಂಕರ್, ರಾಕೆಟ್ ರೆಜಿಮೆಂಟ್ ಮತ್ತು ಅವಳಿ-ಎಂಜಿನ್ ಫೈಟರ್‌ಗಳನ್ನು ಜಮಾವನೆ ಮಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು