ಭಾನುವಾರ, ನವೆಂಬರ್ 29, 2020
20 °C

ಗುರುದ್ವಾರ ನಿರ್ವಹಣೆ ವರ್ಗಾವಣೆ; ಪಾಕ್‌ ನಿರ್ಧಾರಕ್ಕೆ ಭಾರತ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕರ್ತಾರ್‌ಪುರ್ ಸಾಹಿಬ್ ಗುರುದ್ವಾರದ ನಿರ್ವಹಣೆಯನ್ನು ಸಿಖ್ ಆಡಳಿತ ಮಂಡಳಿಯಿಂದ ಸಿಖ್‌ ಸಮುದಾಯಕ್ಕೆ ಸೇರದ ಪ್ರತ್ಯೇಕ ಟ್ರಸ್ಟ್‌ಗೆ ವರ್ಗಾಯಿಸುವ ಪಾಕಿಸ್ತಾನದ ನಿರ್ಧಾರ ಅತ್ಯಂತ ಖಂಡನೀಯವಾಗಿದ್ದು, ಇದು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ‘ ಎಂದು ಭಾರತ ಆಕ್ಷೇಪಿಸಿದೆ.

‌ಪಾಕಿಸ್ತಾನ ಕರ್ತಾಪುರದ ಸಾಹಿಬ್ ಗುರುದ್ವಾರ ಸಮಿತಿಯ ಪ್ರಾತಿನಿಧ್ಯ ಹೊಂದಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗುರುದ್ವಾರದ ನಿರ್ವಹಣೆಯನ್ನು, ಪಾಕಿಸ್ತಾನ್ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿಯಿಂದ, ಸಿಖ್‌ ಸಮುದಾಯವಲ್ಲದ ಇವಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಆಡಳಿತ ಮಂಡಳಿಯ ನಿಯಂತ್ರಣಕ್ಕೆ ವರ್ಗಾಯಿಸುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಎರಡು ದೇಶಗಳ ಜನರ ಸಹಕಾರದಿಂದ ಭಾರತದ ಗುರುದಾಸ್‌ಪುರದಲ್ಲಿರುವ ದೇರಾ ಬಾಬಾ ಸಾಹಿಬ್‌ ಮತ್ತು ಪಾಕಿಸ್ತಾನದಲ್ಲಿರುವ ಗುರುದ್ವಾರ ಕರ್ತಾಪುರ ಸಾಹಿಬ್‌ ನಡುವೆ ಕಾರಿಡಾರ್ ತೆರುವುಗೊಳಿಸಲಾಗಿತ್ತು. ಇದೊಂದು ಐತಿಹಾಸಿಕ ಘಟನೆಯಾಗಿತ್ತು.

‘ಈಗ ಪಾಕಿಸ್ತಾನದ ಗುರುದ್ವಾರದ ನಿರ್ವಹಣೆಯನ್ನು ಬೇರೆ ಟ್ರಸ್ಟ್‌ಗೆ ವರ್ಗಾಯಿಸುತ್ತಿರುವ ಕುರಿತ ವರದಿಗಳನ್ನು ಗಮನಿಸಿದ್ದೇವೆ. ಪಾಕಿಸ್ತಾನ ತೆಗೆದುಕೊಂಡಿರುವ ಈ ಏಕಪಕ್ಷೀಯ ನಿರ್ಧಾರ ಖಂಡನೀಯ ‘ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು