ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ–ಜಾಫ್ನಾ ನಡುವೆ ವಿಮಾನ ಸಂಚಾರ ಪುನರಾರಂಭ

Last Updated 12 ಡಿಸೆಂಬರ್ 2022, 14:38 IST
ಅಕ್ಷರ ಗಾತ್ರ

ಕೊಲಂಬೊ: ಕೋವಿಡ್‌ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚೆನ್ನೈ ಮತ್ತು ಶ್ರೀಲಂಕಾದ ಜಾಫ್ನಾ ನಡುವಿನ ವಿಮಾನ ಸಂಚಾರ ಮತ್ತೆ ಆರಂಭಗೊಂಡಿದೆ.

ಮೊದಲ ವಿಮಾನವು ಜಾಫ್ನಾ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಇಳಿದಿದೆ ಎಂದು ಶ್ರೀಲಂಕಾದ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸೇವೆಗಳ ಅಧ್ಯಕ್ಷ ಉಪುಲ್‌ ಧರ್ಮದಾಸ ಹೇಳಿದ್ದಾರೆ.

ಅಲಯನ್ಸ್‌ ಏರ್‌ ವಿಮಾನವು ಜಾಫ್ನಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅದರಲ್ಲಿದ್ದ 14 ಮಂದಿ ಆಯ್ದ ಪ್ರಯಾಣಿಕರನ್ನು ಸ್ವಾಗತಿಸಲಾಯಿತು ಎಂದು ವಿಮಾನನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡು ನಗರಗಳ ನಡುವೆ ಅಲಯನ್ಸ್‌ ಏರ್‌ ವಿಮಾನವು ವಾರದಲ್ಲಿ ನಾಲ್ಕು ಬಾರಿ ಸಂಚಾರಿಸಲಿದೆ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT