ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಹಡಗು ನಿಗ್ರಹ ಕ್ಷಿಪಣಿ ಪರೀಕ್ಷೆ ಯಶಸ್ವಿ

Last Updated 18 ಮೇ 2022, 12:34 IST
ಅಕ್ಷರ ಗಾತ್ರ

ಬಾಲಸೋರ್, ಒಡಿಶಾ (ಪಿಟಿಐ):ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಡಗು ನಿಗ್ರಹ ಕ್ಷಿಪಣಿಯನ್ನು ಬುಧವಾರ ಒಡಿಶಾದ ಚಾಂಡಿಪುರದಲ್ಲಿ ನೌಕಾ ಹೆಲಿಕಾಪ್ಟರ್ ಮೂಲಕ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಯಿತು ಎಂದುಡಿಆರ್‌ಡಿಒ ಪ್ರಕಟಣೆ ತಿಳಿಸಿವೆ.

ಈ ಯೋಜನೆಯು ತನ್ನೆಲ್ಲಾ ಗುರಿಗಳನ್ನು ಪೂರ್ಣಗೊಳಿಸಿದೆ. ತನ್ನ ಪಥದಲ್ಲಿ ಚಲಿಸುವ ಮೂಲಕ ನಿಖರತೆ ಮತ್ತು ನಿಯಂತ್ರಿತವಾಗಿ ತನ್ನ ನಿರ್ದಿಷ್ಟ ಗುರಿಯನ್ನು ತಲುಪಿದೆ ಎಂದು ಬುಧವಾರ ಡಿಆರ್‌ಡಿಒ ತಿಳಿಸಿದೆ.

ಈ ಕ್ಷಿಪಣಿ ವ್ಯವಸ್ಥೆಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿಹೆಲಿಕಾಪ್ಟರ್‌ಗಳಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಲಾಂಚರ್‌ ಕೂಡ ಒಂದಾಗಿದೆ. ಅಲ್ಲದೆಅತ್ಯಾಧುನಿಕ ನ್ಯಾವಿಗೇಷನ್ ವ್ಯವಸ್ಥೆ ಮತ್ತು ಇಂಟಿಗ್ರೇಟೆಡ್ ಏವಿಯಾನಿಕ್ಸ್ ಅನ್ನೂ ಇದು ಒಳಗೊಂಡಿದೆ. ಕ್ಷಿಪಣಿ ಉಡಾವಣೆ ವೇಳೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಈ ಯಶಸ್ವಿಗಾಗಿರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‌ಡಿಒ ಮುಖ್ಯಸ್ಥ ಡಾ. ಜಿ. ಸತೀಶ್ ರೆಡ್ಡಿ ತಂಡವನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT