ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಧುನಿಕ ಆಕಾಶ್‌ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Last Updated 25 ಜನವರಿ 2021, 15:08 IST
ಅಕ್ಷರ ಗಾತ್ರ

ಬಾಲಾಸೋರ್ ‌(ಒಡಿಶಾ): ಒಡಿಶಾ ಕರಾವಳಿಯಲ್ಲಿರುವ ಉಡಾವಣಾ ಕೇಂದ್ರದಿಂದ ಅತ್ಯಾಧುನಿಕ ಆಕಾಶ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ಯಶಸ್ವಿಯಾಗಿ ನಡೆಸಲಾಗಿದೆ.

ಚಾಂದಿಪುರ್‌ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ ಭೂಮಿಯಿಂದ ಆಕಾಶಕ್ಕೆ ಉಡಾವಣೆಗೊಳ್ಳುವ (ಸರ್ಫೇಸ್‌ ಟು ಏರ್‌) ‘ಆಕಾಶ್‌–ಎನ್‌ಜಿ’ (ನ್ಯೂ ಜನರೇಷನ್‌) ಹೆಸರಿನ ಈ ಕ್ಷಿಪಣಿಯನ್ನು ಉಡಾವಣೆಗೊಳಿಸಲಾಗಿದೆ. ಶತ್ರುರಾಷ್ಟ್ರಗಳ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಭಾರತೀಯ ವಾಯುಪಡೆಯು ಈ ಕ್ಷಿಪಣಿಯನ್ನು ನಿಯೋಜಿಸಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ಷಿಪಣಿಯು ನಿಗದಿತ ಗುರಿಯನ್ನು ನಿಖರವಾಗಿ ತಲುಪಿದೆ. ವಾಯುಪಡೆಯ ಅಧಿಕಾರಿಗಳ ಸಮ್ಮುಖದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತ್‌ ಡೈನಾಮಿಕ್ಸ್‌ ಲಿ. (ಬಿಡಿಎಲ್‌) ಹಾಗೂ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿ. (ಬಿಇಎಲ್‌) ತಂಡವು ಈ ಪರೀಕ್ಷಾರ್ಥ ಉಡಾವಣೆಯನ್ನು ನಡೆಸಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT