ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದ ಶಾಂತಿಯುತ‌ ಭವಿಷ್ಯದ ಸಾಕಾರಕ್ಕೆ ಭಾರತದ ಬೆಂಬಲ-ವಿದೇಶಾಂಗ ಸಚಿವಾಲಯ

ಅಕ್ಷರ ಗಾತ್ರ

ನವದೆಹಲಿ: ಶಾಂತಿಯುತ, ಪ್ರಜಾಪ್ರಭುತ್ವ ಮತ್ತು ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿರುವ ಅಫ್ಗಾನಿಸ್ತಾನ ಸರ್ಕಾರ ಮತ್ತು ಅಲ್ಲಿನ ಜನರಿಗೆ ಭಾರತ ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

2011ರ ಅಕ್ಟೋಬರ್‌ನಲ್ಲಿ ಮಾಡಿಕೊಂಡಿರುವ ಒಪ್ಪಂದವುಭಾರತ ಮತ್ತು ಅಫ್ಗಾನಿಸ್ತಾನದ ದ್ವಿಪಕ್ಷೀಯ ಸಂಬಂಧವನ್ನು ಮುನ್ನಡೆಸುತ್ತದೆ ಎಂದು ಇಲಾಖೆಯ ವಕ್ತಾರ ಅರಿಂದಮ್‌ ಬಗ್ಚಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರ ಸಂಘಟನೆನಡೆಸುತ್ತಿರುವ ಆಕ್ರಮಣದ ಬಗ್ಗೆ ಹೇಳಿರುವ ಬಗ್ಚಿ, ʼನೆರೆರಾಷ್ಟ್ರವಾಗಿ ಅಫ್ಗಾನಿಸ್ತಾನದ ಎಲ್ಲಾ ವರ್ಗದ ಹಿತಾಸಕ್ತಿಯನ್ನುಒಳಗೊಂಡಶಾಂತಿಯುತ ಪ್ರಜಾಪ್ರಭುತ್ವ ಮತ್ತುಸಮೃದ್ಧ ಭವಿಷ್ಯದ ಆಶಯವನ್ನು ಸಾಕಾರಗೊಳಿಸುವುದಕ್ಕಾಗಿ ಭಾರತವು ಅಫ್ಗಾನ್‌ ಸರ್ಕಾರ ಮತ್ತು ಅಲ್ಲಿನ ಜನರನ್ನು ಬೆಂಬಲಿಸಲಿದೆʼ ಎಂದಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಸಂಘಟನೆಯು ನಾಗರಿಕರು ಮತ್ತು ಸೇನಾ ಪಡೆಗಳನ್ನು ಗುರಿಯಾಗಿರಿಸಿಕೆಲವು ವಾರಗಳಿಂದ ದಾಳಿ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT