ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರ ವೇಳೆಗೆ ದೇಶ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬಿ: ಡಿ.ವಿ.ಸದಾನಂದ ಗೌಡ

Last Updated 13 ಸೆಪ್ಟೆಂಬರ್ 2020, 14:42 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತವು 2023ರ ವೇಳೆಗೆ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲಿದೆ’ ಎಂದುರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

‘ರಸಗೊಬ್ಬರ ಆಮದು ಕಡಿತಗೊಳಿಸಲು ‘ಆತ್ಮ ನಿರ್ಭರ್‌ ಭಾರತ್‌’ ಕಾರ್ಯಕ್ರಮದಡಿ ದೇಶದಲ್ಲಿ ₹ 40 ಸಾವಿರ ಕೋಟಿ ಹೂಡಿಕೆ ಮಾಡಿ ರಸಗೊಬ್ಬರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಕರ್ನಾಟಕದ ರೈತರಿಗಾಗಿ ಇಫ್ಕೊ ಆಯೋಜಿಸಿದ್ದ ‘ಸ್ವಾವಲಂಬಿ ಭಾರತ ಮತ್ತು ಸುಸ್ಥಿರ ಕೃಷಿ’ ವೆಬ್‌ನಾರ್‌ನಲ್ಲಿ ಅವರು ಮಾತನಾಡಿದರು.

‘ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲು ಎಲ್ಲಾ ರಸಗೊಬ್ಬರ ಕಂಪನಿಗಳನ್ನು ಅನಿಲ ಆಧಾರಿತ ತಂತ್ರಜ್ಞಾನಕ್ಕೆ ಪರಿವರ್ತಿಸುತ್ತಿದ್ದೇವೆ. ಇತ್ತೀಚೆಗೆ ದೇಶದ ನಾಲ್ಕು ಯೂರಿಯಾ ಘಟಕಗಳನ್ನು ಪುನರುಜ್ಜೀವನಗೊಳಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT