ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿಯಾಗದ ಕ್ಷಯರೋಗ ಪ್ರಕರಣಗಳು ಭಾರತದಲ್ಲೇ ಹೆಚ್ಚು: ಡಬ್ಲ್ಯುಎಚ್‌ಒ

Last Updated 19 ಅಕ್ಟೋಬರ್ 2021, 2:26 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಕಾರಣದಿಂದಾಗಿ ಭಾರತದಲ್ಲಿ ಅತಿಹೆಚ್ಚು ಕ್ಷಯರೋಗ (ಟಿಬಿ) ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ)ವರದಿ ತಿಳಿಸಿದೆ.

2019 ಮತ್ತು 2020ರ ನಡುವೆ ಜಾಗತಿಕವಾಗಿ ಬೆಳಕಿಗೆ ಬಾರದ ಟಿಬಿ ಪ್ರಕರಣಗಳ ಪಟ್ಟಿಯಲ್ಲಿ ಭಾರತ ಹೆಚ್ಚಿನ (ಶೇ 41) ಪಾಲು ಹೊಂದಿದೆ. ಉಳಿದಂತೆ ಶೇ 14 ರಷ್ಟು ಪಾಲನ್ನು ಇಂಡೋನೇಷ್ಯಾ, ಶೇ 12 ರಷ್ಟು ಪಾಲನ್ನು ಫಿಲಿಫೈನ್ಸ್‌ ಮತ್ತು ಶೇ 8 ರಷ್ಟು ಪಾಲನ್ನು ಚೀನಾ ಹೊಂದಿದೆ.

ಕಳೆದ ವಾರ ಪ್ರಕಟವಾದ ವರದಿಯ ಪ್ರಕಾರ ಭಾರತದಲ್ಲಿ41 ಲಕ್ಷ ಜನರು ಕ್ಷಯರೋಗದಿಂದ ಬಳಲುತ್ತಿದ್ದಾರೆ. ಆದಾಗ್ಯೂ ಅವರು ಚಿಕಿತ್ಸೆ ಪಡೆದುಕೊಂಡಿಲ್ಲ ಮತ್ತು ಈ ಪ್ರಕರಣಗಳು ಅಧಿಕೃತವಾಗಿಯೂ ದಾಖಲಾಗಿಲ್ಲ ಎಂದು ಡಬ್ಲ್ಯುಎಚ್‌ಒ ಅಂದಾಜಿಸಿದೆ. ಈ ಸಂಖ್ಯೆ2019 ರಲ್ಲಿ29 ಲಕ್ಷದಷ್ಟಿತ್ತು.

ಜಾಗತಿಕವಾಗಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವಿಕೆಯಲ್ಲಿಯೂ ಋಣಾತ್ಮಕ ಪ್ರವೃತ್ತಿ ಹೆಚ್ಚಾಗಿದೆ. 2019ರಲ್ಲಿ ಶೇ72 ರಷ್ಟುರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಅದು ಈಗ ಶೇ59ಕ್ಕೆ ಇಳಿದಿದೆಎಂದುವರದಿ ಉಲ್ಲೇಖಿಸಿದೆ.

ಟಿಬಿ ಕಾಯಿಲೆಯಿಂದಾಗಿ2020 ರಲ್ಲಿವಿಶ್ವದಾದ್ಯಂತ15 ಲಕ್ಷ (ಎಚ್‌ಐವಿದೃಢಪಟ್ಟಿದ್ದ2,14,000 ರೋಗಿಗಳು ಸೇರಿ) ಜನರು ಮೃತಪಟ್ಟಿದ್ದಾರೆ. ಭಾರತ ಸೇರಿದಂತೆ ಹೆಚ್ಚು ಕ್ಷಯ ಪ್ರಕರಣಗಳು ಇರುವ ಒಟ್ಟು 30 ದೇಶಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. 2021 ಮತ್ತು 2022ರ ನಡುವೆ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸೂಚನೆ ನೀಡಿದೆ ಎಂದು ಡಬ್ಲ್ಯುಎಚ್‌ಒ ಎಚ್ಚರಿಸಿದೆ.

ಅತಿಹೆಚ್ಚು ಕ್ಷಯ ಪ್ರಕರಣಗಳನ್ನು ಹೊಂದಿರುವಎಂಟುರಾಷ್ಟ್ರಗಳು ಜಾಗತಿಕ ಪ್ರಕರಣಗಳಲ್ಲಿ ಮೂರನೇ ಒಂದರಷ್ಟು ಪಾಲು ಹೊಂದಿವೆ. ಈ ಪಟ್ಟಿಯಲ್ಲಿ ಭಾರತ ಮುಂದಿದೆ.ಜಾಗತಿಕ ಪ್ರಕರಣಗಳ ಶೇ26 ರಷ್ಟು ದೇಶದಲ್ಲೇ ಇವೆ.ನಂತರದ ಸ್ಥಾನಗಳಲ್ಲಿ ಚೀನಾ (ಶೇ 8.5), ಇಂಡೋನೇಷ್ಯಾ (ಶೇ 8.4), ಫಿಲಿಫೈನ್ಸ್‌ (ಶೇ 6), ಪಾಕಿಸ್ತಾನ (ಶೇ 5.8), ನೈಜೀರಿಯಾ (ಶೇ 4.6), ಬಾಂಗ್ಲಾದೇಶ (ಶೇ 3.6) ಮತ್ತು ದಕ್ಷಿಣ ಆಫ್ರಿಕಾ (ಶೇ 3.3) ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT