ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಸಾಲ, ಕ್ರಿಪ್ಟೊ ಕರೆನ್ಸಿ ಕುರಿತಾಗಿ ಭಾರತ–ಅಮೆರಿಕ ಚರ್ಚೆ

Last Updated 23 ಫೆಬ್ರವರಿ 2023, 12:33 IST
ಅಕ್ಷರ ಗಾತ್ರ

ಬೆಂಗಳೂರು: ಗುರುವಾರ ನಡೆದ ಜಿ–20 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅಮೆರಿಕದ ಹಣಕಾಸು ಕಾರ್ಯದರ್ಶಿ ಜಾನೆಟ್‌ ಯೆಲೆನ್‌ರವರು ಜಾಗತಿಕ ಸಾಲ ದೋಷಗಳು, ಕ್ರಿಪ್ಟೊ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಬಲವರ್ಧನೆ ಕುರಿತಂತೆ ಚರ್ಚೆ ನಡೆಸಿದರು ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಯೆಲೆನ್ ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ವಿವರಿಸುವ ಸಾಧ್ಯತೆ ಇದ್ದು, ಜಿ–20 ಶೃಂಗಸಭೆಯ ಸಂದರ್ಭ ಏಳು ರಾಷ್ಟ್ರಗಳ ಪ್ರತಿನಿಧಿಗಳ ಜೊತೆಗಿನ ಸಭೆಯಲ್ಲಿ ಭಾಗವಹಿಸುವರು.

ಭಾರತವು ತನ್ನ ಅಧ್ಯಕ್ಷತೆಯಲ್ಲಿ ಮೊದಲ ವರ್ಷದ ಜಿ-20 ಕಾರ್ಯಕ್ರಮವನ್ನು ಟೆಕ್ ಹಬ್ ಬೆಂಗಳೂರಿನ ಹೊರವಲಯದಲ್ಲಿರುವ ಪ್ರಸಿದ್ಧ ನಂದಿಬೆಟ್ಟದಲ್ಲಿ ಆಯೋಜಿಸುತ್ತಿದೆ.

‘ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು (ಎಂಬಿಡಿ), ಜಾಗತಿಕ ಸಾಲದ ದೋಷಗಳು, ಕ್ರಿಪ್ಟೊ ಆಸ್ತಿಗಳು ಹಾಗೂ ಶಕ್ತಿ ಪರಿವರ್ತನೆ ಪಾಲುದಾರಿಕೆ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ’ ಎಂದು ಹಣಕಾಸು ಸಚಿವಾಲಯವು ಟ್ವೀಟ್‌ ಮೂಲಕ ತಿಳಿಸಿದೆ.

ಪಾಲುದಾರಿಕೆಯ ಅಡಿಯಲ್ಲಿ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು, ಹಾಗೆಯೇ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಮತ್ತು ಏಜೆನ್ಸಿಗಳು, ಕಲ್ಲಿದ್ದಲು ಉತ್ಪಾದನೆ ಮತ್ತು ಬಳಕೆಯಿಂದ ದೂರ ಸರಿದು ಅಭಿವೃದ್ಧಿ ಆರ್ಥಿಕತೆ ಹೊಂದಲು ಹಣಕಾಸು ಒದಗಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT