ಬುಧವಾರ, ಡಿಸೆಂಬರ್ 8, 2021
23 °C

ಲಸಿಕೆ ಕೊಡುವುದರಲ್ಲಿ ದೇಶವಲ್ಲ, ಯಾವುದೇ ಖಂಡಕ್ಕಿಂತಲೂ ಮುಂದಿದೆ ಭಾರತ 

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ದೆಹಲಿ: ದೇಶದ ನಾಗರಿಕರಿಗೆ ಕೋವಿಡ್‌ ವಿರುದ್ಧ ಲಸಿಕೆ ನೀಡುವುದರಲ್ಲಿ ಭಾರತವು ಯಾವುದೇ ದೇಶ ಮಾತ್ರವಲ್ಲ, ಯಾವುದೇ ಖಂಡಕ್ಕಿಂತಲೂ ಮುಂದೆ ಇದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.  

ದೇಶದಲ್ಲಿ 100 ಕೋಟಿ ಲಸಿಕೆಗಳನ್ನು ಈ ವರೆಗೆ ನೀಡಲಾಗಿದೆ. ಭಾರತವು ಅತಿ ವೇಗವಾಗಿ ಲಸಿಕೆ ನೀಡುತ್ತಿದೆ ಎಂಬುದನ್ನು ತೋರಿಸಲು ಸರ್ಕಾರವು ಜಗತ್ತಿನ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಭಾರತವು ಯಾವುದೇ ಖಂಡಕ್ಕಿಂತಲೂ ಹೆಚ್ಚು ವೇಗವಾಗಿ ಲಸಿಕೆ ಹಾಕುತ್ತಿದೆ ಎಂದು ಸರ್ಕಾರ ತಿಳಿಸಿದೆ. 

ಸರ್ಕಾರದ ಮಾಹಿತಿ ಪ್ರಕಾರ ಭಾರತವು ದಿನಂಪ್ರತಿ ಸರಾಸರಿ 30.07 ಲಕ್ಷ ಡೋಸ್‌ಗಳನ್ನು ನೀಡುತ್ತಿದೆ. ದಕ್ಷಿಣ ಅಮೆರಿಕವು ನಿತ್ಯ 20.23 ಲಕ್ಷ ಡೋಸ್‌ಗಳನ್ನು ನೀಡುತ್ತಿದೆ.  ಉತ್ತರ ಅಮೆರಿಕದಲ್ಲಿ, ಆಫ್ರಿಕಾದಲ್ಲಿ ಕ್ರಮವಾಗಿ 18.49 ಲಕ್ಷ ಮತ್ತು 12.68 ಲಕ್ಷ ಡೋಸ್‌ಗಳನ್ನು ನೀಡಲಾಗುತ್ತಿದೆ. ಆಸ್ಟ್ರೇಲಿಯಾ ಖಂಡದಲ್ಲಿ 3.33 ಲಕ್ಷ ಲಸಿಕೆಗಳನ್ನು ಕೊಡಲಾಗುತ್ತಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು