ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್ ಕರಾವಳಿ: ಮುಳುಗುತ್ತಿದ್ದ ಮೀನುಗಾರಿಕಾ ದೋಣಿಯಿಂದ ಆರು ಮಂದಿ ರಕ್ಷಣೆ

Last Updated 9 ಮಾರ್ಚ್ 2023, 12:49 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್ ಕರಾವಳಿ ತೀರದಲ್ಲಿ ಮೀನುಗಾರಿಕೆ ತೆರಳಿದ್ದ ದೋಣಿಯೊಳಕ್ಕೆ ನೀರು ನುಗ್ಗಿ ಅಪಾಯದಲ್ಲಿ ಸಿಲುಕಿದ್ದ ಆರು ಮಂದಿಯನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.

ಕರಾವಳಿ ತೀರದಿಂದ 80 ಕಿ.ಮೀ. ದೂರದಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಅಪಾಯದ ಕರೆ ಬಂದ ತಕ್ಷಣ ರಕ್ಷಣೆಗೆ ಧಾವಿಸಿದ ‘ಆರುಷ್’ ಹೆಸರಿನ ನೌಕೆ ಸಂಕಷ್ಟದಲ್ಲಿ ಇದ್ದವರನ್ನು ರಕ್ಷಿಸಿತು ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ದೋಣಿಯ ಮೀನು ಸಂಗ್ರಹಾಗಾರದಲ್ಲಿ ತೂತು ಬಿದ್ದುದರಿಂದ ನೀರು ಒಳಗೆ ನುಗ್ಗಿತ್ತು. ರಕ್ಷಣಾ ಸಿಬ್ಬಂದಿ ಮೊದಲಿಗೆ ಸಬ್‌ಮರ್ಸಿಬಲ್‌ ಪಂಪ್‌ ಬಳಸಿ ನೀರು ಹೊರಗೆ ಹಾಕಿ, ತೂತನ್ನು ಬಂದ್‌ ಮಾಡಿ ದೋಣಿ ಮತ್ತೆ ತೇಲುವಂತೆ ಮಾಡಿದರು ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT