ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ರಲ್ಲಿ 90 ಕೋಟಿ ಇಂಟರ್‌ನೆಟ್ ಬಳಕೆದಾರರು

ಗ್ರಾಮೀಣ ಭಾಗದಲ್ಲಿ ಬೆಳವಣಿಗೆ ಚುರುಕು
Last Updated 3 ಜೂನ್ 2021, 20:25 IST
ಅಕ್ಷರ ಗಾತ್ರ

ನವದೆಹಲಿ: 2025ರ ವೇಳೆಗೆ ಭಾರತದಲ್ಲಿ ಇಂಟರ್‌ನೆಟ್‌ನಸಕ್ರಿಯ ಬಳಕೆದಾರರ ಪ್ರಮಾಣ ಶೇ 45ರಷ್ಟು ಹೆಚ್ಚಳವಾಗಿ 90 ಕೋಟಿ ತಲುಪಲಿದೆ ಎಂದು ಗುರುವಾರ ಬಿಡುಗಡೆಯಾದ ಐಎಎಂಎಐ-ಕಾಂಟರ್ ಕ್ಯೂಬ್ ವರದಿ ತಿಳಿಸಿದೆ. ಕಳೆದ ವರ್ಷ 62.2 ಕೋಟಿ ಬಳಕೆದಾರರು ಇದ್ದರು.

2025ರ ವೇಳೆಗೆ ನಗರ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಇಂಟರ್‌ನೆಟ್ ಬಳಕೆದಾರರು ಇರಲಿದ್ದಾರೆ. ದೇಶದಲ್ಲಿ ಡಿಜಿಟಲ್ ಮೂಲಸೌಕರ್ಯ ಬಲಪಡಿಸುವ ಅಗತ್ಯವನ್ನು ಈ ದತ್ತಾಂಶಗಳು ಸೂಚಿಸುತ್ತವೆ ಎಂದುಭಾರತೀಯ ಅಂತರ್ಜಾಲ ಮತ್ತು ಮೊಬೈಲ್‌ ಸಂಘಟನೆ ವರದಿ ತಿಳಿಸಿದೆ.

ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ನಸಕ್ರಿಯ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಆದರೆ ಇಂಟರ್‌ನೆಟ್ ಸಂಕೇತಗಳ ನುಗ್ಗುವಿಕೆಯ ವೇಗವು (ಪೆನಿಟ್ರೇಷನ್) ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರದಲ್ಲಿ ದುಪ್ಪಟ್ಟು ಇದೆ ಎಂದು ಇಂಟರ್‌ನೆಟ್ ಸಂಸ್ಥೆಗಳ ಸಂಘಟನೆ ಐಎಎಂಎಐ ತಿಳಿಸಿದೆ.

2020ರ ಅಂಕಿ–ಅಂಶಗಳ ಪ್ರಕಾರ, ಇಂಟರ್‌ನೆಟ್ ಬಳೆಕೆದಾರರ ಬೆಳವಣಿಗೆ ಪ್ರಮಾಣವು ನಗರದಲ್ಲಿ ಶೇ 4, ಗ್ರಾಮೀಣ ಭಾಗದಲ್ಲಿ ಶೇ 13ರಷ್ಟು ಕಂಡುಬಂದಿದೆ. ನಗರದ ಜನಸಂಖ್ಯೆಯ ಶೇ 67ರಷ್ಟು ಮಂದಿ ಹಾಗೂ ಗ್ರಾಮೀಣ ಭಾಗದ ಶೇ 31ರಷ್ಟು ಮಂದಿ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಗ್ರಾಮೀಣ ಮತ್ತು ನಗರ ಸೇರಿ ಶೇ 43ರಷ್ಟು ಜನರು ಮಾತ್ರ ಈಗ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಅಗತ್ಯ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಡಿಜಿಟಲ್ ಮೂಲಸೌಕರ್ಯ ಹೆಚ್ಚಳಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT