ಭಾನುವಾರ, ಜೂನ್ 26, 2022
29 °C
ಜೈಲುಗಳಲ್ಲಿ ಸಿಬ್ಬಂದಿ ಕೊರತೆ: ಎನ್‌ಸಿಆರ್‌ಬಿ ಅಂಕಿಅಂಶಗಳಲ್ಲಿ ಬಹಿರಂಗ

ಭಾರತದ ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಕೈದಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿರುವ ಜೈಲುಗಳಲ್ಲಿ ಕಳೆದ ವರ್ಷ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳನ್ನು ಇರಿಸಲಾಗಿತ್ತು. 4.03 ಲಕ್ಷ ಕೈದಿಗಳನ್ನು ಇರಿಸಬಹುದಾದ ಜೈಲುಗಳಲ್ಲಿ 4.78 ಲಕ್ಷ ಕೈದಿಗಳನ್ನು ಇರಿಸಲಾಗಿತ್ತು ಎಂಬ ಅಂಶ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ (ಎನ್‌ಸಿಆರ್‌ಬಿ) ಒದಗಿಸಿರುವ ಮಾಹಿತಿಯಿಂದ ತಿಳಿದುಬಂದಿದೆ.

ಇನ್ನು, ಈ ಜೈಲುಗಳಲ್ಲಿ ಸಿಬ್ಬಂದಿಯ ಕೊರತೆಯೂ ಇದೆ. ಒಟ್ಟು 87,599 ಮಂಜೂರಾದ ಹುದ್ದೆಗಳ ಪೈಕಿ 60,787 ಹುದ್ದೆಗಳು ಮಾತ್ರ ಭರ್ತಿಯಾಗಿವೆ ಎಂದು ಎನ್‌ಸಿಆರ್‌ಬಿ ಮೂಲಗಳು ಹೇಳುತ್ತವೆ.

ಕೈದಿಗಳನ್ನು ಇರಿಸುವ ಜೈಲುಗಳ ಸಾಮರ್ಥ್ಯವನ್ನು 2019ರಲ್ಲಿ ಹೆಚ್ಚಿಸಲಾಗಿದೆ. 2017ರಲ್ಲಿ 3.91 ಲಕ್ಷ, 2018ರಲ್ಲಿ 3.96 ಲಕ್ಷ ಕೈದಿಗಳನ್ನು ಇರಿಸುವ ಸಾಮರ್ಥ್ಯ ಹೊಂದಿದ್ದವು.

ವೈದ್ಯಕೀಯ ಸಿಬ್ಬಂದಿ ಕೊರತೆ: ಜೈಲುಗಳಲ್ಲಿ ಕೈದಿಗಳ ಆರೋಗ್ಯ ತಪಾಸಣೆಗಾಗಿ ಒಟ್ಟು 3,320 ವೈದ್ಯಕೀಯ ಸಿಬ್ಬಂದಿ ಅಗತ್ಯವಿದೆ. ಆದರೆ, 2019ರ ಡಿಸೆಂಬರ್‌ ಅಂತ್ಯಕ್ಕೆ 1,962 ವೈದ್ಯಕೀಯ ಸಿಬ್ಬಂದಿ ಮಾತ್ರ ಇದ್ದರು ಎಂದೂ ಎನ್‌ಸಿಆರ್‌ಬಿ ಅಂಕಿ–ಅಂಶಗಳು ಹೇಳಿವೆ.

ಅಂಕಿ–ಅಂಶ

(2019ರ ಡಿಸೆಂಬರ್‌ ಅಂತ್ಯದ ವರೆಗಿನ ಮಾಹಿತಿ)

4.78 ಲಕ್ಷ: ದೇಶಧ ಜೈಲುಗಳಲ್ಲಿರುವ ಒಟ್ಟು ಕೈದಿಗಳ ಸಂಖ್ಯೆ

4.58 ಲಕ್ಷ: ಪುರುಷ ಕೈದಿಗಳ ಒಟ್ಟು ಸಂಖ್ಯೆ

19,913: ಮಹಿಳಾ ಕೈದಿಗಳ ಒಟ್ಟು ಸಂಖ್ಯೆ

7,239: ಮಂಜೂರಾದ ಅಧಿಕಾರಿಗಳ ಶ್ರೇಣಿ ಹುದ್ದೆಗಳ ಸಂಖ್ಯೆ

4,840: ಭರ್ತಿಯಾಗಿರುವ ಅಧಿಕಾರಿಗಳ ಶ್ರೇಣಿ ಹುದ್ದೆಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು