ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ ಸೋಂಕು | ಔಷಧ ಪೂರೈಕೆಗೆ ಅಗತ್ಯ ಕ್ರಮ: ಕೇಂದ್ರ ಸರ್ಕಾರ

Last Updated 27 ಜೂನ್ 2021, 16:08 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳಲ್ಲಿ ಚಿಕಿತ್ಸೆಗೆ ವಿಶ್ವದ ವಿವಿಧೆಡೆಯಿಂದ ಆಂಫೊಟೆರಿಸಿನ್ ಬಿ ಸೇರಿದಂತೆ ಅಗತ್ಯ ಔಷಧವನ್ನು ಪಡೆಯಲು ಸಮರೋಪಾದಿಯಲ್ಲಿ ಕ್ರಮವಹಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಈ ಸಂಬಂಧ 375 ಪುಟಗಳ ಪ್ರಮಾಣಪತ್ರವನ್ನು ಸಲ್ಲಿಸಿದೆ. ಕಪ್ಪುಶಿಲೀಂಧ್ರ ಪ್ರಕರಣಗಳ ಚಿಕಿತ್ಸೆಗೆ ಔಷಧದ ಲಭ್ಯತೆ, ಮಾಡಿಕೊಂಡಿರುವ ಸಿದ್ಧತೆ ಕುರಿತಂತೆ ಸುಪ್ರೀಂ ಕೋರ್ಟ್‌ ಮಾಹಿತಿಯನ್ನು ಕೋರಿತ್ತು.

ದೇಶೀಯವಾಗಿ ಆಗಸ್ಟ್‌ ತಿಂಗಳಲ್ಲಿ 5.525 ಲಕ್ಷ ಯೂನಿಟ್ ‘ಲೈಪೋಸೋಮಲ್ ಆಂಫೊಟೆರಿಸಿನ್ ಬಿ ಔಷಧ ಉತ್ಪಾದನೆಯಾಗುವ ಸಂಭವಿವದೆ. ಇದನ್ನು ರಾಜ್ಯಗಳಿಗೆ ದಾಖಲಾಗಿರುವ ಪ್ರಕರಣಗಳಿಗೆ ಅನುಸಾರವಾಗಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದೆ.

ದೇಶೀಯವಾಗಿ ಉತ್ಪಾದನೆ ಮತ್ತು ಆಮದು ಮಾಡಿಕೊಳ್ಳುವ ಮೂಲಕ ಔಷಧ ಲಭ್ಯತೆ ಪ್ರಮಾಣ ಹೆಚ್ಚಿಸಲು ಕ್ರಮವಹಿಸಲಾಗಿದೆ. ಮೇ ಮತ್ತು ಜೂನ್‌ ತಿಂಗಳಲ್ಲಿ ಈ ಔಷಧಕ್ಕೆ ಬೇಡಿಕೆಯು ಸಾಕಷ್ಟು ಹೆಚ್ಚಿದ್ದು, ಕಡಿಮೆ ಅವಧಿಯಲ್ಲಿ ಔಷಧಗಳ ಪೂರೈಕೆಗೂ ಕ್ರಮವಹಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT