ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಕರಾವಳಿಯಲ್ಲಿ ನೀರಿನ ಮೇಲೆ ಇಳಿದ ಎಎಲ್‌ಎಚ್ ‘ಧ್ರುವ್’: ಮೂವರ ರಕ್ಷಣೆ

Last Updated 8 ಮಾರ್ಚ್ 2023, 10:51 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ನೌಕಾಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್(ಎಎಲ್‌ಎಚ್‌) ‘ಧ್ರುವ್’ ದೈನಂದಿನ ಕಣ್ಗಾವಲು ಕಾರ್ಯಾಚರಣೆ ವೇಳೆ ಮುಂಬೈ ಕರಾವಳಿಯಲ್ಲಿ ನೀರಿನ ಮೇಲೆ ಇಳಿದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ನೌಕಾ ಗಸ್ತು ಪಡೆ ಸಿಬ್ಬಂದಿ, ಶೋಧ ನಡೆಸಿ ಹೆಲಿಕಾಪ್ಟರ್‌ನಲ್ಲಿದ್ದ ಮೂವರನ್ನೂ ರಕ್ಷಣೆ ಮಾಡಿದೆ.

‘ದೈನಂದಿನ ಕಣ್ಗಾವಲು ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ಎಎಲ್‌ಎಚ್ ಮುಂಬೈ ಕರಾವಳಿಯ ಸ್ವಲ್ಪ ದೂರದಲ್ಲಿ ತುರ್ತು ಲ್ಯಾಂಡ್ ಆಗಿದೆ’ ಎಂದು ಪಶ್ಚಿಮ ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ತುರ್ತು ಲ್ಯಾಂಡಿಂಗ್ ನಡೆದಿರಬಹುದು ಎಂದು ತಿಳಿದುಬಂದಿದ್ದು, ತನಿಖೆಗೆ ಆದೇಶಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT