ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಸಾಗರದಲ್ಲಿ ನೌಕಾಪಡೆಯ ಸಮರಾಭ್ಯಾಸ

Last Updated 24 ಜನವರಿ 2023, 14:11 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಸೇನೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬಲ ವೃದ್ಧಿಸಿಕೊಳ್ಳುತ್ತಿರುವ ಬೆನ್ನಲ್ಲೇ ಭಾರತೀಯ ನೌಕಾಪಡೆಯು ತನ್ನ ಯುದ್ಧ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಸಲುವಾಗಿ ಈ ಪ್ರದೇಶದಲ್ಲಿ ಭಾರಿ ಸಮರಾಭ್ಯಾಸ ನಡೆಸಲು ನಿರ್ಧರಿಸಿದೆ.

‘ಎರಡು ವರ್ಷಕ್ಕೊಮ್ಮೆ ನಡೆಯುವ ಥಿಯೇಟರ್‌ ಲೆವಲ್‌ ಆಪರೇಷನಲ್‌ ರೆಡಿನೆಸ್‌ ಎಕ್ಸರ್‌ಸೈಸ್‌ (ಟ್ರೊಪೆಕ್ಸ್‌) ನೌಕಾಪಡೆಯ ಕಾರ್ಯಾಚರಣೆಯ ‍ಪರಿಕಲ್ಪನೆಯನ್ನು ಮೌಲ್ಯೀಕರಿಸುವ ಹಾಗೂ ಪರಿಷ್ಕರಿಸುವ ಗುರಿ ಹೊಂದಿದೆ. ಜೊತೆಗೆ ಒಟ್ಟಾರೆ ಯುದ್ಧ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶ ಒಳಗೊಂಡಿದೆ’ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

‘ಜನವರಿಯಿಂದ ಮಾರ್ಚ್‌ವರೆಗೆ ನಡೆಯುವ ‘ಟ್ರೊಪೆಕ್ಸ್‌’ನಲ್ಲಿ ನೌಕಾ ಪಡೆ ಹಾಗೂ ಕರಾವಳಿ ಕಾವಲು ಪಡೆಯ ಡೆಸ್ಟ್ರಾಯರ್‌ಗಳು, ಯುದ್ಧನೌಕೆಗಳು ಹಾಗೂ ಅವುಗಳ ಬೆಂಗಾವಲು ಹಡಗುಗಳು, ಸಬ್‌ಮರಿನ್‌ಗಳು ಹಾಗೂ ಯುದ್ಧ ವಿಮಾನಗಳು ಭಾಗವಹಿಸಲಿವೆ’ ಎಂದು ನೌಕಾಪಡೆಯ ವಕ್ತಾರ, ಕಮಾಂಡರ್‌ ವಿವೇಕ್‌ ಮಧವಾಲ್‌ ತಿಳಿಸಿದ್ದಾರೆ.

‘ಸಮುದ್ರದೊಳಗೆ ಹಾಗೂ ಬಂದರು ಪ್ರದೇಶದಲ್ಲಿ ವಿವಿಧ ಹಂತಗಳಲ್ಲಿ ತಾಲೀಮು ನಡೆಸಲಾಗುತ್ತದೆ. ಸೇನಾ ಪಡೆ, ವಾಯುಪಡೆ ಹಾಗೂ ಕರಾವಳಿ ಕಾವಲು ಪಡೆಗಳೊಂದಿಗೆ ಕಾರ್ಯಾಚರಣೆ ಕುರಿತಾದ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೂ ಟ್ರೊಪೆಕ್ಸ್‌ ನೆರವಾಗಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT