ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ನೌಕಾಪಡೆಗೆ ಸದ್ಯದಲ್ಲೇ ಮತ್ತೆರಡು ಯುದ್ಧನೌಕೆಗಳ ಸೇರ್ಪಡೆ

Last Updated 15 ಮೇ 2022, 14:41 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಗೆ ಎರಡು ಹೊಸ ಯುದ್ಧನೌಕೆಗಳು ಮಂಗಳವಾರ ಸಮುದ್ರ ಸಂಚಾರ ಆರಂಭಿಸಲಿದ್ದು, ನಂತರ ಅವುಗಳು ನೌಕಾಪಡೆಗೆ ಸೇರ್ಪಡೆಯಾಗಲಿವೆ. ಇದರಿಂದ ನೌಕಾಪಡೆಗೆ ಭವಿಷ್ಯದಲ್ಲಿ ಇನ್ನೂ ಎರಡು ಯುದ್ಧನೌಕೆಗಳು ನಿಯೋಜನೆಗೊಳ್ಳಲಿವೆ.

ಕಾರ್ಯಾರಂಭವಾದ ಮೇಲೆ ಒಂದು ಯುದ್ಧನೌಕೆಗೆ ಐಎನ್‌ಎಸ್ ಸೂರತ್ ಎಂದು ನಾಮಕರಣ ಮಾಡಲಾಗುವುದು. ವಿಶಾಖಪಟ್ಟಣಂದಲ್ಲಿನ ನಾಲ್ಕನೇ ಯುದ್ಧನೌಕೆ ಇದಾಗಿದ್ದು, ಮುಂಬೈನ ಮಜಗಾಂವ್‌ ಡಾಕ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಸಮುದ್ರ ಸಂಚಾರಕ್ಕೆ ಚಾಲನೆ ನೀಡಲಾಗುವುದು.

ಸ್ಥಳೀಯವಾಗಿ ನಿರ್ಮಿತಗೊಂಡಿರುವ ಯುದ್ಧನೌಕೆ ಇದಾಗಿದೆ. ಉದಯಗಿರಿ ಎಂಬುವುದು ಎರಡನೇ ಯುದ್ಧನೌಕೆಯಾಗಿದೆ. ಪ್ರಾಜೆಕ್ಟ್ –17ಎ ಅಡಿಯಲ್ಲಿ ಇದನ್ನು ನಿರ್ಮಿತಗೊಳಿಸಲಾಗಿದೆ.

ಐಎನ್‌ಎಸ್‌ ಸೂರತ್ ಯುದ್ಧನೌಕೆಯು ₹36,000 ಕೋಟಿ ಮೊತ್ತದ ಪ್ರಾಜೆಕ್ಟ್-15ಬಿ ನಾಲ್ಕನೇ ಮತ್ತು ಅಂತಿಮ ಹಡಗು. ಈ ಯೋಜನೆಯಲ್ಲಿ ಮೂರು ರೀತಿಯ ಯುದ್ಧನೌಕೆಗಳನ್ನು ನಿರ್ಮಿಸಲಾಗಿದೆ. ಐಎನ್‌ಎಸ್‌ ವಿಶಾಖಪಟ್ಟಣಂ ಅನ್ನು 2021ರ ನವೆಂಬರ್‌ನಲ್ಲಿ ನಿಯೋಜಿಸಲಾಗಿದ್ದರೆ, ಎರಡನೇ ಹಡಗು ಮರ್ಮಗೋವಾ ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಮೂರನೇ ಹಡಗು ಇಂಫಾಲ್ ಪ್ರಯೋಗದ ಹಂತದಲ್ಲಿದೆ.

ಪ್ರಾಜೆಕ್ಟ್‌–17ಎ ಅಡಿಯಲ್ಲಿ ಉದಯಗಿರಿ ಯುದ್ಧನೌಕೆಯು ಮೂರನೇ ಹಡಗು. ಸುಧಾರಿತ ತಂತ್ರಜ್ಞಾನ ಮತ್ತು ಸಂವೇದಕಗಳನ್ನು ಹೊಂದಿದೆ. ₹ 45,000 ಕೋಟಿ ವೆಚ್ಚದಲ್ಲಿ ಇಂಥ ಏಳು ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ.

ಉದಯಗಿರಿ ಯುದ್ಧನೌಕೆಯು ಹಿಂದಿನ ’ಉದಯಗಿರಿ’ ನೌಕೆಯ ಪುನರ್ಜನ್ಮವಾಗಿದೆ. ಹಳೆಯ ಉದಯಗಿರಿ ಯುದ್ಧನೌಕೆಯು 1976 ರಿಂದ 2007ರ ನಡುವೆ 30 ವರ್ಷಗಳವರೆಗೆ ಹಲವಾರು ಸವಾಲಿನ ಕಾರ್ಯಾಚರಣೆಗಳನ್ನು ನಡೆಸಿ ಯಶಸ್ವಿಯಾಗಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT