ಶನಿವಾರ, ಜನವರಿ 29, 2022
23 °C

ರೈಲ್ವೆ ಭದ್ರತಾ ದಳಕ್ಕೆ ನೇಮಕಾತಿ ನಡೆಯುತ್ತಿಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ : ಭಾರತೀಯ ರೈಲ್ವೆ ಭದ್ರತಾ ದಳ (ಭಾರತೀಯ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ - ಆರ್ ಪಿ ಎಫ್ )ಕ್ಕೆ ಯಾವುದೇ ನೇಮಕಾತಿ ನಡೆಯುತ್ತಿಲ್ಲ ಎಂದು ರೈಲ್ವೆ ಇಲಾಖೆ ಸೋಮವಾರ ಹೇಳಿದೆ. 

ಆರ್ ಪಿಎಫ್ ಗೆ ಕಾನ್ಸ್‌ಟೇಬಲ್ ನೇಮಕಾತಿ ನಡೆಯುತ್ತಿದೆ ಎಂದು ಕೆಲವು ವೆಬ್ ಸೈಟ್ ಗಳಲ್ಲಿ ವರದಿ ಪ್ರಕಟವಾಗಿವೆ ಎನ್ನಲಾಗಿದ್ದು ಅವುಗಳನ್ನು ರೈಲ್ವೆ ಇಲಾಖೆ ತಳ್ಳಿ ಹಾಕಿದೆ. 

'ಆರ್ ಪಿ ಎಫ್  ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ 2022' ಮೂಲಕ ಭಾರತೀಯ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಕೆಲವು ವೆಬ್‌ಸೈಟ್‌ಗಳು ಪ್ರಕಟಣೆಯನ್ನು ವರದಿ ಮಾಡಿವೆ. ಆದರೆ, ಆ ರೀತಿಯ ನೇಮಕಾತಿ ಪ್ರಕಟಣೆಯನ್ನು ಆರ್ ಪಿಎಫ್ ಹೊರಡಿಸಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ. 

ಈ ಸಂಬಂಧ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು