ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಲಿಂಗ ಬದಲಿಸಿಕೊಂಡ ದಂಪತಿ ಮಗುವಿನ ನಿರೀಕ್ಷೆಯಲ್ಲಿ...

Last Updated 3 ಫೆಬ್ರುವರಿ 2023, 10:19 IST
ಅಕ್ಷರ ಗಾತ್ರ

ಕೊಟ್ಟಾಯಂ: ಕೇರಳದಲ್ಲಿ ಲಿಂಗ ಬದಲಿಸಿಕೊಂಡ ಟ್ರಾನ್ಸ್‌ಜೆಂಡರ್ ದಂಪತಿ (ತೃತೀಯ ಲಿಂಗಿ) ಈಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಕೋಯಿಕ್ಕೋಡ್‌ನ ಉಮ್ಮಲತ್ತೂರ್‌ನ ಟ್ರಾನ್ಸ್‌ಜೆಂಡರ್ ದಂಪತಿ ಜಿಯಾ ಮತ್ತು ಜಹಾದ್ ಈ ಸಂತೋಷದ ಸುದ್ದಿಯನ್ನು ಬಿತ್ತರಿಸಿದ್ದಾರೆ.

ಹೆಣ್ಣಾಗಿ ಜನಿಸಿದ ಜಹಾದ್, ಪುರುಷನಾಗಿ ಮತ್ತು ಗಂಡಾಗಿ ಜನಿಸಿದ ಜಿಯಾ ಮಹಿಳೆಯಾಗಿಯೂ ಲಿಂಗ ಪರಿವರ್ತನೆ ಮಾಡಿಕೊಂಡಿದ್ದರು. ಈ ದಂಪತಿಯೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ದೇಶದ ಮೊದಲ ತೃತೀಯ ಲಿಂಗಿ ಗರ್ಭಧಾರಣೆ ಇದಾಗಿದೆ.

ಅಪ್ಪನೂ ನಾನೇ ಅಮ್ಮನೂ ನಾನೇ ಎಂದು ದೇಶದ ಮೊದಲ ಟ್ರಾನ್ಸ್‌ಮನ್ ಅಪ್ಪ ಆಗಲಿರುವ ಜಹಾದ್ ತಿಳಿಸುತ್ತಾರೆ.

ಮಗುವನ್ನು ದತ್ತು ಪಡೆಯುವುದಕ್ಕೆ ಕಾನೂನು ಹಾದಿ ಕಠಿಣವಾಗಿದ್ದರಿಂದ ತೃತೀಯ ಲಿಂಗಿ ಗರ್ಭಧಾರಣೆ ಬಗ್ಗೆ ಯೋಚನೆ ಮಾಡಿರುವುದಾಗಿ ಈ ದಂಪತಿ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT