ಇಂಡಿಗೊ ವಿಮಾನ ಹಿಂಭಾಗಕ್ಕೆ ಹಾನಿ

ಕೋಲ್ಕತ್ತ: ಇಲ್ಲಿನ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ತನ್ನ ಏರ್‌ಬಸ್ ಎ 321 ವಿಮಾನದ ಹಿಂಭಾಗಕ್ಕೆ ಹಾನಿಯಾಗಿದೆ ಎಂದು ಇಂಡಿಗೋ ಹೇಳಿದೆ.
ಸೋಮವಾರ ಢಾಕಾದಿಂದ ಕೋಲ್ಕತ್ತಗೆ ಬಂದಿಳಿದ ವಿಮಾನದಲ್ಲಿ ಈ ಘಟನೆ ನಡೆದಿದೆ. ದುರಸ್ತಿಗಾಗಿ ವಿಮಾನವನ್ನು ಕೋಲ್ಕತ್ತದಲ್ಲೇ ಲ್ಯಾಂಡಿಂಗ್ ಮಾಡಲಾಯಿತು. ಘಟನೆಯ ಬಗ್ಗೆ ವಿವರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಂಡಿಗೋ ಪ್ರಕಟಣೆ ತಿಳಿಸಿದೆ.
ಯಾವುದೇ ಪ್ರಯಾಣಿಕ ಹಾನಿ ವರದಿಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಘಟನೆಯ ವೇಳೆ ವಿಮಾನದಲ್ಲಿ 173 ಪ್ರಯಾಣಿಕರಿದ್ದರು ಎಂದು ಕೋಲ್ಕತ್ತ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ವಿಮಾನದ ಹಿಂಭಾಗ ಅಥವಾ ಎಂಪೆನೇಜ್ ನೆಲಕ್ಕೆ ಅಥವಾ ಯಾವುದೇ ಇತರ ಸ್ಥಿರ ವಸ್ತುವಿಗೆ ಡಿಕ್ಕಿ ಹೊಡೆದಾಗ ಈ ರೀತಿಯಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.