ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌ ಟೈಮ್ಸ್‌ ಭಾರತದ ವಿರುದ್ಧ ಸುಳ್ಳು ಹರಡುತ್ತಿದೆ: ಅನುರಾಗ್‌ ಠಾಕೂರ್‌

Last Updated 10 ಮಾರ್ಚ್ 2023, 14:24 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಭಾರತದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಶುಕ್ರವಾರ ಆರೋಪಿಸಿದ್ದಾರೆ.

‘ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಕುರಿತಂತೆ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ತುಣುಕು ದುರುದ್ದೇಶಪೂರಿತ ಮತ್ತು ಕಾಲ್ಪನಿಕವಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಠಾಕೂರ್‌, ‘ನ್ಯೂಯಾರ್ಕ್‌ ಟೈಮ್ಸ್‌ ಬಹಳ ದಿನಗಳ ಹಿಂದೆಯೇ ತನ್ನ ತಟಸ್ಥ ನಿಲುವುಗಳನ್ನು ಕೈಬಿಟ್ಟಿದೆ. ಭಾರತ, ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಹಾಗೂ ಮೌಲ್ಯಗಳ ವಿರುದ್ಧ ಅಪಪ್ರಚಾರ ಮಾಡುವ ಏಕೈಕ ಉದ್ದೇಶದಿಂದ ಇದನ್ನು ಪ್ರಕಟಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಂಥದ್ದೇ ಮನಸ್ಥಿತಿ ಹೊಂದಿರುವ ಮತ್ತಿತರ ವಿದೇಶಿ ಮಾಧ್ಯಗಳು ಭಾರತ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿ ಮೋದಿ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಇದೂ ಅದರ ಮುಂದುವರಿದ ಭಾಗವಷ್ಟೆ. ಆದರೆ ಇಂಥ ಮಿಥ್ಯೆಗಳು ಬಹುಕಾಲ ಉಳಿಯುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಭಾರತದಲ್ಲಿ ಇತರ ಮೂಲಭೂತ ಹಕ್ಕುಗಳಂತೆ ಮಾಧ್ಯಮ ಸ್ವಾತಂತ್ರ್ಯವೂ ಪ್ರಶ್ನಾತೀತವಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವವಿದೆ. ನಮ್ಮಲ್ಲಿ ಪರಿಪಕ್ವತೆ ಇದೆ. ನಿರ್ದಿಷ್ಟ ಕಾರ್ಯಸೂಚಿ ಹೊಂದಿರುವ ಇಂಥ ಮಾಧ್ಯಮಗಳಿಂದ ಪ್ರಜಾಪ್ರಭುತ್ವದ ವ್ಯಾಕರಣ ಕಲಿಯುವ ಅಗತ್ಯ ನಮಗಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ನ್ಯೂಯಾರ್ಕ್‌ ಟೈಮ್ಸ್‌ ಕಾಶ್ಮೀರದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕುರಿತಂತೆ ಹರಡಿರುವ ಲಜ್ಜಾಹೀನ ಸುಳ್ಳು ಖಂಡನೀಯ. ಭಾರತದ ನೆಲದಲ್ಲಿ ಇಂತಹ ಮನಸ್ಥಿತಿಗಳು ತಮ್ಮ ಕಾರ್ಯಸೂಚಿಗಳನ್ನು ಹರಡಲು ಭಾರತೀಯರು ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT