ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ರವಿ ಕುಮಾರ್ ಎಸ್ ಅವರು ರಾಜೀನಾಮೆ ನೀಡಿದ್ದಾರೆ.
ಕಂಪನಿ ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಮಾಹಿತಿಯಲ್ಲಿ ಈ ವಿಷಯ ತಿಳಿದು ಬಂದಿದೆ. ಅವರ ರಾಜೀನಾಮೆ ಅಂಗೀಕಾರವಾಗಿದೆ ಅ.11ಮಂಗಳವಾರವೇ ಅವರ ಅಧಿಕಾರದ ಕಡೆಯ ದಿನವಾಗಿದೆ ಎಂದು ಕಂಪನಿ ತಿಳಿಸಿದೆ.
ಇನ್ಫೋಸಿಸ್ ಕಂಪನಿಗೆ ರವಿ ಕುಮಾರ್ ಅವರ ಕೊಡುಗೆಯನ್ನು ಕಂಪನಿ ಸ್ಮರಿಸಿದೆ.
2002 ರಲ್ಲಿರವಿ ಕುಮಾರ್ ಅವರು ಇನ್ಫೋಸಿಸ್ ಸೇರಿದ್ದರು. 2017 ರಲ್ಲಿ ಸಿಒಒ ಆಗಿ ಭಡ್ತಿ ಪಡೆದಿದ್ದರು. ಕಳೆದ ವರ್ಷ ಯುಬಿ ಪ್ರವೀಣ್ ರಾವ್ ಅವರಿಂದ ತೆರವಾದ ಅಧ್ಯಕ್ಷ ಸ್ಥಾನವನ್ನು ಅವರು ವಹಿಸಿಕೊಂಡಿದ್ದರು.
ಸಾಫ್ಟ್‌ವೇರ್ ತಜ್ಞರಾಗಿದ್ದ ರವಿ ಕುಮಾರ್ ಅವರು ಇನ್ಫೋಸಿಸ್ ಸೇರುವುದಕ್ಕೂ ಮೊದಲು ಹೋಮಿ ಬಾಬಾ ಅಣುಶಕ್ತಿ ಸಂಸ್ಥೆಯಲ್ಲಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.