ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಯುದ್ಧನೌಕೆಗಳ ಜೊತೆ ತಾಲೀಮು ನಡೆಸಿದ ಐಎನ್‌ಎಸ್‌ ಸಹ್ಯಾದ್ರಿ

Last Updated 12 ಮಾರ್ಚ್ 2023, 13:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅರಬ್ಬೀ ಸಮುದ್ರದಲ್ಲಿ ನಡೆದ ಯುದ್ಧನೌಕೆಗಳ ತಾಲೀಮಿನಲ್ಲಿ ಫ್ರಾನ್ಸ್‌ನ ಎರಡು ಯುದ್ಧನೌಕೆಗಳ ಜೊತೆ ಭಾರತ ನೌಕಾಪಡೆಯ ಐಎನ್‌ಎಸ್‌ ಸಹ್ಯಾದ್ರಿ ಪಾಲ್ಗೊಂಡಿತ್ತು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ 11 ಮತ್ತು 12ರಂದು ತಾಲೀಮು ನಡೆಯಿತು. ಯುದ್ಧನೌಕೆಗಳು ಹಲವಾರು ರೀತಿಯ ಅಭ್ಯಾಸಗಳನ್ನು ನಡೆಸಿದವು. ಈ ನೌಕಾ ಅಭ್ಯಾಸವು ಉಭಯ ದೇಶಗಳ ಮಧ್ಯೆ ಕಾರ್ಯಸಾಧ್ಯತೆ ಮತ್ತು ಉನ್ನತ ಮಟ್ಟದ ಸಹಕಾರವನ್ನು ಪುನಃ ದೃಢೀಕರಿಸಿತು ಎಂದು ಭಾರತೀಯ ನೌಕಾಪಡೆ ಪ್ರಕಟಣೆಯಲ್ಲಿ ಹೇಳಲಾಗಿದೆ.

ಐಎನ್‌ಎಸ್‌ ಸಹ್ಯಾದ್ರಿಯು ಕ್ಷಿಪಣಿಗಳನ್ನು ಹೊತ್ತ ಯುದ್ಧನೌಕೆಯಾಗಿದ್ದು, ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಶಸ್ತ್ರಗಳು ಮತ್ತು ಸೆನ್ಸರ್‌ಗಳನ್ನು ಹೊಂದಿದೆ. ಇದು ವಿಶಾಖಪಟ್ಟಣದಲ್ಲಿ ನೌಕಾನೆಲೆ ಹೊಂದಿರುವ ಭಾರತ ನೌಕಾಪಡೆಯ ಪೂರ್ವ ನೌಕಾಬಲದ ಭಾಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT