ಗುರುವಾರ , ಜನವರಿ 28, 2021
15 °C
ಕ್ರೈಸ್ತ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ:

ಅಂತರಧರ್ಮೀಯ ಮದುವೆ ಅನೂರ್ಜಿತಗೊಳಿಸಿದ ಕೊಚ್ಚಿ ಚರ್ಚ್‌ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೊಚ್ಚಿಯ ಸೇಂಟ್‌ ಜೋಸೆಫ್‌ ಚರ್ಚ್‌ನಲ್ಲಿ ನಡೆದ ಅಂತರ ಧರ್ಮೀಯ ಮದುವೆ ಅಸಿಂಧು ಎಂದು ಚರ್ಚ್‌ ರಚಿಸಿದ್ದ ಸಮಿತಿ ಘೋಷಿಸಿದೆ.

ಅಲ್ಲದೇ, ಈ ಮದುವೆ ಕಾರ್ಯ ನೆರವೇರಿಸಿದ ಪಾದ್ರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದೂ ಸಮಿತಿ ಹೇಳಿದೆ.

ಕ್ಯಾಥೋಲಿಕ್‌ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ ಕಳೆದ ನವೆಂಬರ್‌ನಲ್ಲಿ ನೆರವೇರಿತ್ತು. ಈ ಕುರಿತು ವಿಚಾರಣೆ ನಡೆಸಿ, ವರದಿ ನೀಡಲು ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ಚರ್ಚ್‌ ರಚಿಸಿತ್ತು. ನಿಯಮಗಳನ್ನು ಪಾಲನೆ ಮಾಡದ ಕಾರಣ ಈ ಮದುವೆ ಅಸಿಂಧು ಎಂದು ಸಮಿತಿ ಹೇಳಿದೆ.

ಕ್ರೈಸ್ತ ಧರ್ಮದ ಮಹಿಳೆಯರನ್ನು ಗುರಿಯಾಗಿಸಿಕೊಂಡು ‘ಲವ್‌ ಜಿಹಾದ್‌’ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಇಲ್ಲಿ ನಡೆದ ಅಂತರಧರ್ಮೀಯ ವಿವಾಹದ ಬಗ್ಗೆ ಚರ್ಚ್‌ನ ಆಂತರಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು