ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಬಿಕ್ಕಟ್ಟಿಗೆ ಪರಿಹಾರ: ರಾಷ್ಟ್ರಪತಿ ಆಶಯ

Last Updated 20 ನವೆಂಬರ್ 2020, 12:38 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕು ಪರಿಹಾರಕ್ಕೆ ಅಂತರರಾಷ್ಟ್ರೀಯ ಸಮುದಾಯ ಪರಿಹಾರ ಒದಗಿಸಲಿದೆ ಹಾಗೂ ಈ ಬಿಕ್ಕಟ್ಟಿನಿಂದ ಶಕ್ತಿಯುತವಾಗಿ ಹೊರಹೊಮ್ಮಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಧಿಕೃತ ಹೇಳಿಕೆಯ ಅನುಸಾರ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಮಾನವೀಯತೆಯ ಉಳಿವಿಗಾಗಿ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಂಘಟಿತ ಕಾರ್ಯ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಕೊರೊನಾ ಸಂಕಷ್ಟಕ್ಕೆ ಪರಿಹಾರ ಹುಡುಕಲು ಅಂತರರಾಷ್ಟ್ರೀಯ ಸಮುದಾಯ ಯತ್ನಿಸುತ್ತಿದ್ದು, ಬಹುತೇಕ ಹತ್ತಿರದಲ್ಲಿದೆ. ಈ ಬಿಕ್ಕಟ್ಟಿನಿಂದ ಹೊರಬರಲಿದೆ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ವರ್ಚುವಲ್‌ ಸ್ವರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಹಂಗೇರಿ ಪ್ರತಿನಿಧಿ, ಮಾಲ್ಡೀವ್ಸ್‌ನ ರಾಯಭಾರಿ ಮತ್ತು ತಜಿಕಿಸ್ತಾನದ ರಾಯಭಾರಿ ಅವರ ನೇಮಕವನ್ನು ಸ್ವೀಕರಿಸಿದ್ದು, ಅವರಿಗೆ ಶುಭಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT