ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ | ಫೆಬ್ರುವರಿ 14ಕ್ಕೆ ಉಪಗ್ರಹ ಉಡಾವಣೆ

Last Updated 12 ಫೆಬ್ರುವರಿ 2022, 0:59 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ವರ್ಷದ ಮೊದಲ ಉಪಗ್ರಹವನ್ನು ಇದೇ 14 ರಂದು ಉಡಾವಣೆ ಮಾಡಲಿದ್ದು, ಪಿಎಸ್‌ಎಲ್‌ವಿ ಸಿ52ರ ಮೂಲಕ ಭೂವೀಕ್ಷಣ ಉಪಗ್ರಹವನ್ನು (ಇಒಎಸ್‌–04) ಭೂ ಕಕ್ಷೆಗೆ
ಸೇರಿಸಲು ಸಿದ್ಧತೆಗಳನ್ನು ಭರದಿಂದ ನಡೆಸಿದೆ.

ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಮುಂಜಾನೆ 5.59 ಕ್ಕೆ ಉಡಾವಣೆ ಮಾಡಲಾಗುವುದು ಎಂದು ಇಸ್ರೊ ಮೂಲಗಳು ಹೇಳಿವೆ.

ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣದಿಂದ ಎರಡು ವರ್ಷಗಳಿಂದ ಇಸ್ರೊ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಕೋವಿಡ್‌ ಮೂರನೇ ಅಲೆ ತಗ್ಗಿದ್ದು ದೇಶದಲ್ಲಿ ಸಹಜ ಸ್ಥಿತಿ ನೆಲೆಸಿರುವುದರಿಂದ ಈ ವರ್ಷ ಉಪಗ್ರಹಗಳ ಉಡಾವಣೆ ಕೈಗೊಳ್ಳುವ ಸಾಧ್ಯತೆ ಇದೆ.

1,710 ಕೆಜಿ ತೂಕದ ಇಒಎಸ್‌–04 ಉಪಗ್ರಹವನ್ನು 529 ಕಿ.ಮೀ ಧ್ರುವೀಯ ಕಕ್ಷೆಯಲ್ಲಿ ನೆಲೆಗೊಳಿಸಲಾಗುವುದು. ಎರಡು ಸಣ್ಣ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ಯಲಿದೆ. ಈ ಪೈಕಿ ಒಂದನ್ನು ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು ಕೊಲೊರಾಡೊ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ (ಇನ್‌ಸ್ಪೈರ್‌ಸ್ಯಾಟ್‌–1 ಉಪಗ್ರಹ) ಅಭಿವೃದ್ಧಿಪಡಿಸಲಾಗಿದೆ ಹಾಗೂ ಇನ್ನೊಂದನ್ನು (ಐಎನ್‌ಎಸ್‌–2ಬಿ) ಭಾರತ ಮತ್ತು ಭೂತಾನ್‌ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ಇಒಎಸ್‌–04 ರೆಡಾಡ್‌ ಇಮೇಜಿಂಗ್‌ ಉಪಗ್ರಹವಾಗಿದೆ. ಎಲ್ಲ ರೀತಿಯ ಹವಾಮಾನ ಸ್ಥಿತಿಯಲ್ಲೂ ಅಧಿಕ ಗುಣಮಟ್ಟದ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ಕೃಷಿ, ಅರಣ್ಯ, ತೋಟಗಳು, ಮಣ್ಣಿನ ತೇವಾಂಶ, ಜಲವಿಜ್ಞಾನ ಮತ್ತು ಪ್ರವಾಹದ ನಕಾಶೆ ರೂಪಿಸಲು ನೆರವಾಗುತ್ತದೆ ಎಂದು ಇಸ್ರೊ ಮೂಲಗಳು ತಿಳಿಸಿವೆ.

ಈವರೆಗೆ ಭೂವೀಕ್ಷಣಾ ಕಾರ್ಯ ನಡೆಸುತ್ತಿದ್ದ ಇನ್ಸಾಟ್‌–4 ಬಿಯ ಕಾರ್ಯಾವಧಿ ಮುಗಿದಿದ್ದು, ಜ.24 ರಿಂದ ಸೇವೆಯ ಹಂತ ಹಂತವಾಗಿ ನಿಲ್ಲಿಸಲಾಯಿತು. ವಿಶ್ವಸಂಸ್ಥೆ ಮತ್ತು ಬಾಹ್ಯಾಕಾಶ ತ್ಯಾಜ್ಯ ನಿರ್ವಹಣೆ ಸಮನ್ವಯ ಸಮಿತಿಯು ನಿಗದಿ ಮಾಡಿರುವ ಬಾಹ್ಯಾಕಾಶ ತ್ಯಾಜ್ಯ ತಗ್ಗಿಸುವಿಕೆಯ ಮಾರ್ಗಸೂಚಿಗೆ ಅನುಗುಣವಾಗಿ ಇನ್ಸಾಟ್‌–4 ಬಿಯ ತ್ಯಾಜ್ಯ ನಿರ್ವಹಣೆ ಸುರಕ್ಷಿತವಾಗಿ ಪೂರ್ಣಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ

1,710 ಕೆಜಿ ತೂಕದ ಇಒಎಸ್‌–04 ಉಪಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT