ಸೋಮವಾರ, ಮಾರ್ಚ್ 27, 2023
32 °C

36 ಸಂವಹನ ಉಪಗ್ರಹಗಳು ಕಕ್ಷೆಗೆ: ಇತಿಹಾಸ ಬರೆದ ಇಸ್ರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀಹರಿಕೋಟಾ/ಬೆಂಗಳೂರು: ಇಲ್ಲಿನ ಉಡಾವಣಾ ಕೇಂದ್ರದಿಂದ ಭಾನುವಾರ ನಸುಕಿನಲ್ಲಿ ನಭಕ್ಕೆ ಚಿಮ್ಮಿದ ಭಾರವಾದ ರಾಕೆಟ್ ಎಲ್‌ವಿಎಂ 3–ಎಂ2, 36 ಸಂವಹನ ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗಳಿಗೆ ಯಶಸ್ವಿಯಾಗಿ ಸೇರಿಸಿದೆ. ಇದು ಸಂಸ್ಥೆಯ ಪಾಲಿಗೆ ಐತಿಹಾಸಿಕ ಕ್ಷಣ ಎಂದು ಇಸ್ರೊ ಹೇಳಿದೆ.

ಬ್ರಿಟನ್‌ ಮೂಲದ ಒನ್‌ವೆಬ್‌ ಲಿಮಿಟೆಡ್‌ ಎಂಬ ಕಂಪನಿಗೆ ಸೇರಿದ ಈ ಸಂವಹನ ಉಪಗ್ರಹಗಳನ್ನು ಬ್ರಾಡ್‌ಬ್ಯಾಂಡ್‌ ಸೇವೆಗಾಗಿ ಬಳಸಲಾಗುತ್ತದೆ. ಒಬ್‌ವೆಬ್ ಲಿಮಿಟೆಡ್‌, ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್ಐಎಲ್‌) ಗ್ರಾಹಕ ಸಂಸ್ಥೆಯಾಗಿದೆ. ಭಾರ್ತಿ ಎಂಟರ್‌ಪ್ರೈಸಸ್‌ ಈ ಒಬ್‌ವೆಬ್‌ ಕಂಪನಿಯಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಹೊಂದಿದೆ.

ಈ ಉಪಗ್ರಹಗಳ ಯಶಸ್ವಿ ಉಡಾವಣೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಇಸ್ರೊ ಮುಖ್ಯಸ್ಥ ಎಸ್‌.ಸೋಮನಾಥ್‌, ‘ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿನ ವಿಜ್ಞಾನಿಗಳಿಗೆ ಭಾನುವಾರ ನಸುಕಿನಲ್ಲಿಯೇ ದೀಪಾವಳಿ ಸಂಭ್ರಮ ಶುರುವಾಗಿದೆ’ ಎಂದು ಹೇಳಿದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು