ಶನಿವಾರ, ಡಿಸೆಂಬರ್ 5, 2020
21 °C

ಹವಾಲಾ ದಂಧೆ; ವಿವಿಧ ನಗರಗಳಲ್ಲಿ ಐಟಿ ಅಧಿಕಾರಿಗಳ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ವಿವಿಧ ನಗರಗಳಲ್ಲಿ ಹವಾಲಾ ದಂಧೆ ನಡೆಸುತ್ತಿರುವ ಮತ್ತು ನಕಲಿ ಬಿಲ್‌ ಮೂಲಕ ವ್ಯವಹಾರ ನಡೆಸುತ್ತಿರುವವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಒಟ್ಟು ₹5.26 ಕೋಟಿ ಮೌಲ್ಯದ ಚಿನ್ನ ಮತ್ತು ನಗದು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಕಾರಿಗಳು ಮಂಗಳವಾರ ತಿಳಿಸಿದರು.

‘ಆದಾಯ ತೆರಿಗೆ ಇಲಾಖೆಯ ಸಿಬಿಡಿಟಿ ಅಧಿಕಾರಿಗಳು  ದೆಹಲಿ–ಎನ್‌ಸಿಆರ್‌, ಹರಿಯಾಣ, ಪಂಜಾಬ್‌, ಉತ್ತರಖಂಡ ಮತ್ತು ಗೋವಾದ 42 ಸ್ಥಳಗಳಲ್ಲಿ ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ‘ ಎಂದು ಅವರು ಮಾಹಿತಿ ನೀಡಿದರು.

‘ಹವಾಲ ದಂಧೆಂತಹ ಚಟುವಟಿಕೆ ನಡೆಸುತ್ತಿರುವ ಜಾಲಗಳು ಮತ್ತು ನಕಲಿ ಬಿಲ್ ಮೂಲ ಬೃಹತ್ ನಗದು ಹಣದ ವ್ಯವಹಾರ ನಡೆಸುತ್ತಿರುವವರ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದರು.

ದಾಳಿ ವೇಳೆ ₹2.37 ಕೋಟಿ ನಗದು ಮತ್ತು ₹2.89 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾ ಗಿದ್ದು, 17 ಬ್ಯಾಂಕ್‌ ಲಾಕರ್‌ಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಇವುಗಳನ್ನು ಇನ್ನೂ ಪರಿಶೀಲಿಸಿಲ್ಲ’ ಎಂದು ಸಿಬಿಡಿಟಿ ಹೇಳಿಕೆ ನೀಡಿದೆ. 

‘ಈ ಶೋಧ ಕಾರ್ಯಾಚರಣೆಯಲ್ಲಿ ಹವಾಲ ದಂಧೆಯಲ್ಲಿ ಸಂಪರ್ಕ ಹೊಂದಿರುವವರು, ಮಧ್ಯವರ್ತಿಗಳು, ಹವಾಲಾಗಳು, ಫಲನಾಭವಿಗಳು ಮತ್ತು ದೊಡ್ಡ ಸಂಸ್ಥೆಗಳ ವಿರುದ್ಧ ಸಾಕ್ಷ್ಯಗಳು ಲಭಿಸಿವೆ. ಹವಾಲಾ ದಂಧೆ ಸಂಬಂಧಿತ ₹500 ಕೋಟಿ ಮೌಲ್ಯದ ದಾಖಲೆಗಳು ಸಿಕ್ಕಿವೆ’ ಎಂದು ಸಿಬಿಡಿಟಿ ಹೇಳಿದೆ.

‘ಫಲಾನುಭವಿಗಳು ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಹಲವು ಬ್ಯಾಂಕ್‌ ಖಾತೆಗಳನ್ನು ತೆರದಿದ್ದಾರೆ. ಇದೇ ಖಾತೆಗಳಲ್ಲಿ ಅಕ್ರಮ ಹಣಕಾಸು ವರ್ಗಾವಣೆಗಳು ಆಗುತ್ತಿದೆ. ಅಲ್ಲದೆ ಈ ಹವಾಲಾ ಜಾಲದಲ್ಲಿ ಬ್ಯಾಂಕ್‌ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು