ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿರುವ ಶಾಸಕನನ್ನು ಗುಟ್ಟಾಗಿ ಭೇಟಿ ಮಾಡುತ್ತಿದ್ದ ಪತ್ನಿ ಬಂಧನ

Last Updated 11 ಫೆಬ್ರುವರಿ 2023, 13:00 IST
ಅಕ್ಷರ ಗಾತ್ರ

ಚಿತ್ರಕೂಟ(ಉತ್ತರ ಪ್ರದೇಶ): ರಗೌಲಿ ಜೈಲಿನಲ್ಲಿರುವ ಶಾಸಕ ಅಬ್ಬಾಸ್ ಅನ್ಸಾರಿಯನ್ನು ಅಕ್ರಮವಾಗಿ ಜೈಲು ಸಿಬ್ಬಂದಿ ಕೊಠಡಿಯಲ್ಲಿ ಭೇಟಿಯಾಗುತ್ತಿದ್ದ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ತವ್ಯ ಲೋಪದ ಆರೋಪದ ಮೇಲೆ ಜೈಲಿನ ಅಧೀಕ್ಷಕ ಮತ್ತು 8 ಮಂದಿಯನ್ನು ಅಮಾನತು ಮಾಡಲಾಗಿದ್ದು, ಇಲಾಖಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಶುಕ್ರವಾರ ಜೈಲಿನ ಮೇಲೆ ದಾಳಿ ನಡೆಸಿದಾಗ ಶಾಸಕರ ಪತ್ನಿ ನಿಖಾತ್ ಅನ್ಸಾರಿ, ಉಪ ಅಧೀಕ್ಷಕರ ಕೊಠಡಿಯಲ್ಲಿ ಪತಿ ಅಬ್ಬಾಸ್ ಅನ್ಸಾರಿ ಅವರನ್ನು ಭೇಟಿಯಾಗಿದ್ದು ಕಂಡುಬಂದಿದೆ ಎಂದು ಚಿತ್ರಕೂಟದ ಪೊಲೀಸ್ ವರಿಷ್ಠಾಧಿಕಾರಿ ವೃಂದಾ ಶುಕ್ಲಾ ಹೇಳಿದ್ದಾರೆ.

ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಅಬ್ಬಾಸ್ ಅನ್ಸಾರಿ ಕಳೆದ 3 ತಿಂಗಳಿನಿಂದ ಜೈಲಿನಲ್ಲಿದ್ದಾರೆ.

ಅಬ್ಬಾಸ್ ಪತ್ನಿ ನಿಖಾತ್ ಅನ್ಸಾರಿ ಬಳಿ ಮೊಬೈಲ್ ಜೊತೆಗೆ ಹಲವು ಆಕ್ಷೇಪಾರ್ಹ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ರಗೌಲಿ ಜೈಲು ಪೊಲೀಸ್ ಠಾಣೆಯ ಎಸ್‌ಐ ಶ್ಯಾಮ್‌ದೇವ್ ಸಿಂಗ್ ದೂರಿನ ಮೇರೆಗೆ ಜೈಲು ಅಧೀಕ್ಷಕ ಅಶೋಕ್ ಸಾಗರ್, ಉಪ ಅಧೀಕ್ಷಕ, ಒಬ್ಬರು ಪೊಲೀಸ್ ಕಾನ್‌ಸ್ಟೆಬಲ್, ಅಬ್ಬಾಸ್ ಪತ್ನಿ ನಿಖಾತ್ ಮತ್ತು ಅವರ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT