ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ʼಆಜಾದಿ ಕಾ ಅಮೃತ್‌ ಮಹೋತ್ಸವʼಕ್ಕೆ ಚಾಲನೆ ನೀಡಿದ ಜೈಶಂಕರ್

Last Updated 14 ಆಗಸ್ಟ್ 2021, 7:40 IST
ಅಕ್ಷರ ಗಾತ್ರ

ನವದೆಹಲಿ:ದೇಶದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌)ಆಯೋಜಿಸಿರುವʼಆಜಾದಿ ಕಾ ಅಮೃತ್‌ ಮಹೋತ್ಸವʼಕ್ಕೆವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಚಾಲನೆ ನೀಡಿದರು.

ಈ ವಿಚಾರವನ್ನುಅವರು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ʼಐಸಿಸಿಆರ್‌ ಮುಖ್ಯ ಕಚೇರಿಯಲ್ಲಿ ಅಮೃತ ಮಹೋತ್ಸವ ಭವ್ಯ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಐತಿಹಾಸಿಕ ಕ್ಷಣಕ್ಕೆಇದು ಸೂಕ್ತ ಆಚರಣೆ. ಸ್ವತಂತ್ರ ರಾಷ್ಟ್ರವಾಗಿ75ನೇ ವರ್ಷವು, ನಾವು ನೂರನೇ ವರ್ಷದ ಸಂಭ್ರಮದ ವೇಳೆ ಎಲ್ಲಿರುತ್ತೇವೆ ಎಂಬುದನ್ನು ಕಲ್ಪಿಸುವ ಆರಂಭಿಕ ಬಿಂದುವಾಗಿದೆʼ ಎಂದು ಬರೆದುಕೊಂಡಿದ್ದಾರೆ.

ನಾವು ಐತಿಹಾಸಿಕ ಮೈಲಿಗಲ್ಲನ್ನು (ಆಗಸ್ಟ್‌ 15ರಂದು) ‌ಮುಟ್ಟಲಿದ್ದೇವೆ. ಇದು ನಿಸ್ಸಂಶಯವಾಗಿ ನಾವು ಸಂಭ್ರಮಿಸುವ ಕ್ಷಣವಾಗಿದೆ. ಆದರೆ ಅದೇರೀತಿ ಇದುಆತ್ಮಾವಲೋಕನ ಮತ್ತುಹೊಸಸಂಕಲ್ಪ ಮಾಡುವ ಕ್ಷಣವೂ ಆಗಿದೆ ಎಂದು ತಿಳಿಸಿದ್ದಾರೆ.

ಸಾಂಸ್ಕೃತಿಕ ಸಂಬಂಧಗಳು, ಪರಸ್ಪರ ತಿಳುವಳಿಕೆ‌ ಮತ್ತು ಸಾಂಸ್ಕೃತಿಕವಿನಿಮಯವನ್ನು ಬಲಪಡಿಸುವುದು ಐಸಿಸಿಆರ್‌ನ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT