ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿ.ಎಂ ಪಿಣರಾಯಿ ರಾಜೀನಾಮೆಗೆ ಆಗ್ರಹ

Last Updated 8 ಜೂನ್ 2022, 20:09 IST
ಅಕ್ಷರ ಗಾತ್ರ

ತಿರುವನಂತಪುರ/ಪಾಲಕ್ಕಾಡ್:ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧ ಮಾಡಿರುವ ಹೊಸ ಆರೋಪಗಳು ಕೇರಳ ರಾಜಕೀಯದಲ್ಲಿ ಬುಧವಾರ ಬಿರುಗಾಳಿಯನ್ನೇ ಎಬ್ಬಿಸಿದವು.

ಸ್ವಪ್ನಾ ಸುರೇಶ್‌ ಅವರು ಬೆಳಿಗ್ಗೆ ಮಾಡಿದ ಆರೋಪಗಳಿಂದಾಗಿ ರಾಜಕೀಯ ಕೆಸರೆರಚಾಟ ಆರಂಭವಾಯಿತಲ್ಲದೇ, ವಿರೋಧ ಪಕ್ಷಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಒತ್ತಾಯಿಸಿದವು. ಆದರೆ, ಸಿಪಿಎಂನ ಹಿರಿಯ ನಾಯಕ ಮತ್ತು ಎಲ್‌ಡಿಎಫ್‌ನ ಸಂಚಾಲಕ ಇ.ಪಿ.ಜಯರಾಜನ್‌ ಅವರು ವಿರೋಧ ಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದರು.

ಆರೋಪಗಳೇನು?: ಪಾಲಕ್ಕಾಡ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಪ್ನಾ, ‘ತನ್ನ ಜೀವಕ್ಕೆ ಬೆದರಿಕೆಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ವಿರುದ್ಧದ ಈ ಆರೋಪಗಳಿಗೆ ಕಾರಣ. ಇದರಿಂದ ಹಿಂದೆ ರಾಜಕೀಯ ಅಥವಾ ವೈಯಕ್ತಿಕ ಕಾರ್ಯಸೂಚಿ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT