ಶುಕ್ರವಾರ, ಮಾರ್ಚ್ 31, 2023
23 °C

ಶ್ರೀನಗರ: ಖೀರ್‌ ಭವಾನಿ ದೇಗುಲಕ್ಕೆ ರಾಹುಲ್, ಪ್ರಿಯಾಂಕಾ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು–ಕಾಶ್ಮೀರದಲ್ಲಿ ಸೋಮವಾರ ಭಾರತ್‌ ಜೋಡೋ ಯಾತ್ರೆ ಪೂರ್ಣಗೊಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜಮ್ಮು–ಕಾಶ್ಮೀರದ ಪ್ರಮುಖ ದೇವಾಲಯಗಳಾದ ಖೀರ್ ಭವಾನಿ ಮತ್ತು ಹಜರತ್‌ಬಾಲ್‌ಗೆ ಮಂಗಳವಾರ ಭೇಟಿ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿನ  ಮಾತಾ ಖೀರ್ ಭವಾನಿ ದೇವಸ್ಥಾನ ಎಂದು ಕರೆಯಲ್ಪಡುವ ರಾಗ್ನ್ಯಾ ದೇವಿಯ ದೇಗುಲಕ್ಕೆ ತೆರಳಿದರು. ನಂತರ ದಲ್ ಸರೋವರದ ದಡದಲ್ಲಿರುವ ದರ್ಗಾ ಹಜರತ್‌ಬಾಲ್‌ಗೆ ಭೇಟಿ ನೀಡಿದರು. ಭದ್ರತಾ ದೃಷ್ಟಿಯಿಂದ ಇವರ ಭೇಟಿಯನ್ನು ಗೌಪ್ಯವಾಗಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು