ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಕುಶಿಮಾ ಅಣುಸ್ಥಾವರ: ತ್ಯಾಜ್ಯ ನೀರು ಸಮುದ್ರಕ್ಕೆ ಬಿಡುವ ಯೋಜನೆಗೆ ಸಮ್ಮತಿ

Last Updated 18 ಮೇ 2022, 13:59 IST
ಅಕ್ಷರ ಗಾತ್ರ

ಟೋಕಿಯೊ(ಎಪಿ):ಫುಕುಶಿಮಾ ಅಣುಸ್ಥಾವರದ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವ ಯೋಜನೆಗೆ ಜಪಾನ್‌ನ ಪರಮಾಣು ನಿಯಂತ್ರಣ ಪ್ರಾಧಿಕಾರ ಬುಧವಾರ ಅನುಮೋದನೆ ನೀಡಿದೆ. ಈ ಸಂಬಂಧ ರೂಪಿಸಿದ್ದ ಕಾರ್ಯಯೋಜನೆಯು ಸುರಕ್ಷಿತ ಮತ್ತು ಪರಿಸರಕ್ಕೆ ಕಡಿಮೆ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತದೆ ಎಂದು ತಿಳಿಸಿದೆ.

ಜಪಾನ್‌ನಲ್ಲಿ2011ರಲ್ಲಿ ಸಂಭವಿಸಿದ ಸುನಾಮಿಯಿಂದ ಫುಕುಶಿಮಾ ಅಣುಸ್ಥಾವರ‌ದ ಕೂಲಿಂಗ್ ವ್ಯವಸ್ಥೆ ನಾಶವಾಗಿ ಮೂರು ರಿಯಾಕ್ಟರ್‌ಗಳು ಕರಗಿದ್ದವು. ಇದರಿಂದಾಗಿ ಅಗಾದ ಪ್ರಮಾಣದ ವಿಕಿರಣ ಸೋರಿಕೆಯಾಗಿತ್ತು. ಹಾನಿಗೊಳಗಾದ ರಿಯಾಕ್ಟರ್‌ಗಳನ್ನು ತಂಪಾಗಿಸಿದ ನೀರನ್ನು ಸುಮಾರು 1000 ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲಾಗಿದೆ. ಈ ನೀರನ್ನು ಮುಂದಿನ ವರ್ಷದಿಂದ ಹಂತಹಂತವಾಗಿ ಸಮುದ್ರಕ್ಕೆ ಬಿಡುವ ಬಗ್ಗೆ ಯೋಜನೆ ರೂಪಿಸಲಾಗಿದೆ.

ಆದರೆ, ಭಾರಿ ಪ್ರಮಾಣದಲ್ಲಿ ವಿಕಿರಣಗಳನ್ನು ಒಳಗೊಂಡಿರುವ ಈ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂಬ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT