ಗುರುವಾರ , ಫೆಬ್ರವರಿ 25, 2021
28 °C
ಸ್ಮಾರಕ ಉದ್ಘಾಟಿಸಿದ ಮುಖ್ಯಮಂತ್ರಿ ಪಳನಿಸ್ವಾಮಿ

ತಮಿಳುನಾಡಿನಲ್ಲಿ ದಿ.ಜಯಲಲಿತಾ ಸ್ಮಾರಕ ಉದ್ಘಾಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ನೆನಪಿಗಾಗಿ ಇಲ್ಲಿನ ಮರೀನಾ ಬೀಚ್‌ ಬಳಿ ನಿರ್ಮಾಣ ಮಾಡಿರುವ ‘ಫೀನಿಕ್ಸ್‌‘ ಪರಿಕಲ್ಪನೆಯ ಸ್ಮಾರಕವನ್ನು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಬುಧವಾರ ಉದ್ಘಾಟಿಸಿದರು.

ಎಐಎಡಿಎಂಕೆ ಪಕ್ಷದ ಬೆಂಬಲಿಗರ ಜಯ ಘೋಷಣೆಯ ನಡುವೆ ಪಳನಿಸ್ವಾಮಿ ಈ ಸ್ಮಾರಕವನ್ನು ಉದ್ಘಾಟಿಸಿದರು.  ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಹಾಗೂ ವಿಧಾನಸಭಾ ಅಧ್ಯಕ್ಷ ಪಿ. ಧನಪಾಲ್ ಪಾಲ್ಗೊಂಡಿದ್ದರು. ಈ ಮೂವರು ಮುಖಂಡರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ನಮಸ್ಕರಿಸಿದರು.

ಇಲ್ಲಿನ ಮರೀನಾ ಬೀಚ್‌ನಲ್ಲಿ ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್‌ ಅವರ ಸ್ಮಾರಕವಿದೆ. ಅದರ ಪಕ್ಕದಲ್ಲೇ ಜಯಲಲಿತಾ ಅವರ ದೇಹವನ್ನು 2016ರ ಡಿಸೆಂಬರ್ 5 ರಂದು ಸಮಾಧಿ ಮಾಡಲಾಗಿತ್ತು. 2018ರಲ್ಲಿ ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಜಂಟಿಯಾಗಿ ಈ ಸ್ಮಾರಕಕ್ಕೆ ಅಡಿಗಲ್ಲು ಹಾಕಿದ್ದರು.

ಈ ಸಂದರ್ಭದಲ್ಲಿ ಸಚಿವರು, ಸಂಸದರು, ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರು ಹಾಜರಿದ್ದರು. ರಾಜ್ಯ ಸರ್ಕಾರ ಈ ‘ಫೀನಿಕ್ಸ್’ ಪರಿಕಲ್ಪನೆ ಸ್ಮಾರಕ ನಿರ್ಮಾಣಕ್ಕೆ ₹50 ಕೋಟಿ ಅನುದಾನ ನೀಡಿತ್ತು. ಈ ಸ್ಮಾರಕವನ್ನು ಜಯಲಲಿತಾ ಅಭಿಮಾನಿಗಳು ‘ಅಮ್ಮಾ‘ ಎಂದು ಕರೆಯುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು