ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ತಂತ್ರಗಳ ವಿರುದ್ಧ ಜೆಡಿಯು ರ‍್ಯಾಲಿ

Last Updated 27 ಸೆಪ್ಟೆಂಬರ್ 2022, 14:06 IST
ಅಕ್ಷರ ಗಾತ್ರ

ಪಟ್ನಾ: ಬಿಜೆಪಿಯ ಕೋಮುವಾದಿ ರಾಜಕಾರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬಿಹಾರದಾದ್ಯಂತ ಜೆಡಿಯು ಹಮ್ಮಿಕೊಂಡಿರುವ ‘ಸತರ್ಕತಾ ಈವಂ ಜಾಗರುಕ್ತಾ ಯಾತ್ರೆ'ಯನ್ನು ಮಂಗಳವಾರ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪಟ್ನಾದಲ್ಲಿ ಮುನ್ನೆಡೆಸಿದರು.

ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್‌ ರಾಜನ್‌ ಸಿಂಗ್, ಸಂಸದೀಯ ಸಮಿತಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ರ‍್ಯಾಲಿಯಲ್ಲಿ ಭಾಗಿಯಾಗಿದ್ದರು.

‘ಬಿಜೆಪಿಯ ಕುತಂತ್ರಗಳ ವಿರುದ್ಧ ಜನರನ್ನು ಎಚ್ಚರಿಸುವುದೇ ನಮ್ಮ ರ‍್ಯಾಲಿಯ ಉದ್ದೇಶ. ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ತಂತ್ರವನ್ನು ಬಿಜೆಪಿ ಬಳಸುತ್ತಿದೆ. ಈ ತಂತ್ರಕ್ಕೆ ಜನರು ಮಾರುಹೋಗುತ್ತಾರೆ. ಇದರಿಂದಾಗಿ, ಯಾವುದೇ ಭರವಸೆ ಈಡೇರಿಸದೇ ಇದ್ದರೂ ಕೇಂದ್ರದಲ್ಲಿ ಅಧಿಕಾರದಲ್ಲಿ ಮುಂದುವರೆಯಬಹುದು’ ಎಂದು ಬಿಜೆಪಿಗೆ ತಿಳಿದಿದೆ ಎಂದು ಕುಶ್ವಾಹ ಹೇಳಿದರು.

ಪಟ್ನಾ ಹೈಕೋರ್ಟ್‌ ಆವರಣದ ಬಳಿ ಇರುವ ಅಂಬೇಡ್ಕರ್‌ ಅವರ ಪ್ರತಿಮೆಗೆ ಗೌರವ ಸಲ್ಲಿಸುವ ಮೂಲಕ ಈ ಯಾತ್ರೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಗಾಂಧಿ ಮೈದಾನಕ್ಕೆ ಮೆರವಣಿಗೆ ಹೊರಟಿತು.

ಬಿಹಾರದ ಎಲ್ಲಾ 38 ಜಿಲ್ಲೆಗಳಲ್ಲೂ ಮೆರವಣಿಗೆ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT