ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್: ವಿವಾಹಿತ ಪುರುಷ- ಮಹಿಳೆಯ ಬೆತ್ತಲೆ ಮೆರವಣಿಗೆ, 6 ಮಂದಿ ಸೆರೆ

Last Updated 29 ಸೆಪ್ಟೆಂಬರ್ 2021, 15:51 IST
ಅಕ್ಷರ ಗಾತ್ರ

ದುಮ್ಕಾ: ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಮಹಿಳೆ ಹಾಗೂ ಪುರುಷನನ್ನು ಗ್ರಾಮಸ್ಥರು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಈ ಇಬ್ಬರೂ ವಿವಾಹವಾಗಿದ್ದರೂ ಅನೈತಿಕ ಸಂಬಂಧ ಹೊಂದಿದ್ದರು ಎಂದು ಕೃತ್ಯದಲ್ಲಿ ಭಾಗಿಯಾಗಿದ್ದವರು ಆರೋಪಿಸಿದ್ದಾರೆ.

‘ಮುಫ್ಪಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಯೂರ್‌ನಾಚ್ ಎಂಬ ಹಳ್ಳಿಯಲ್ಲಿ ಮಧ್ಯವಯಸ್ಕ ಒಬ್ಬ ಮಹಿಳೆ ಹಾಗೂ ಪುರುಷನನ್ನು ಥಳಿಸಿ, ಗ್ರಾಮದಲ್ಲಿ ಬೆತ್ತಲೆ ಮೆರವಣಿಗೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ‘ ಎಂದು ದುಮ್ಕಾ ಜಿಲ್ಲೆಯ ಎಸ್‌ಪಿ ಅಂಬರ್ ಲಾಕ್ರಾ ತಿಳಿಸಿದ್ದಾರೆ.

‘ಸಂತ್ರಸ್ತ ಪುರುಷ ಹಾಗೂ ಮಹಿಳೆ ಅಕ್ಕಪಕ್ಕದ ಗ್ರಾಮದವರು. ಇಬ್ಬರೂ ದಿನಗೂಲಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ಬೇರೆ ಮದುವೆಯಾಗಿತ್ತು. ಅದಾಗ್ಯೂ ಇಬ್ಬರೂ ಪರಸ್ಪರ ಸಂಬಂಧ ಹೊಂದಿದ್ದರು ಎಂದು ಗ್ರಾಮದ ಕೆಲವರು ಅನಾಗರಿಕವಾಗಿ ನಡೆದುಕೊಂಡಿದ್ದಾರೆ. ಈ ಕುರಿತು ವಿಚಾರಣೆ ನಡೆಯುತ್ತಿದೆ‘ ಎಂದು ಎಸ್‌ಪಿ ತಿಳಿಸಿದ್ದಾರೆ.

ಇದೇ ಜಿಲ್ಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಯುವತಿಯೊಬ್ಬಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆಂದು ಆರೋಪಿಸಿ ಕೆಲ ಯುವಕರು ಆಕೆಯ ಕೊರಳಿಗೆ ಚಪ್ಪಲಿಗಳನ್ನು ಹಾಕಿ ಬೆತ್ತಲೆ ಮೆರವಣಿಗೆ ಮಾಡಿದ್ದರು ಎಂದು ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT