ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಜಿಲ್ಲಾ ಮಟ್ಟದಲ್ಲಿ ಪಿಎಫ್‌ಎಂಎಸ್‌ ಜಾರಿ

ಜಿಲ್ಲಾ ಮಟ್ಟದಲ್ಲಿ ಪಿಎಫ್‌ಎಂಎಸ್‌ ಜಾರಿ ಮಾಡಿದ ಮೊದಲ ಕೇಂದ್ರಾಡಳಿತ ಪ್ರದೇಶ
Last Updated 24 ಅಕ್ಟೋಬರ್ 2020, 5:50 IST
ಅಕ್ಷರ ಗಾತ್ರ

ಶ್ರೀನಗರ: ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣೆ ವ್ಯವಸ್ಥೆ (ಪಿಎಫ್‌ಎಂಎಸ್‌)ಯನ್ನು ಕಾರ್ಯಗತಗೊಳಿಸಿದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಎಂಬ ಹೆಗ್ಗಳಿಕೆಗೆಜಮ್ಮು ಮತ್ತು ಕಾಶ್ಮೀರ ಪಾತ್ರವಾಗಿದೆ.

ಎಂಟು ಜಿಲ್ಲೆಗಳಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಶ್ರೀನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಜನರಲ್ ಆಫ್ ಅಕೌಂಟ್ಸ್‌ನ ಹೆಚ್ಚುವರಿ ನಿಯಂತ್ರಕ ಸುಬೋಧ್‌ ಕುಮಾರ್ ಅವರು ಈ ವ್ಯವಸ್ಥೆಗೆ ಆನ್‌ಲೈನ್ ಮೂಲಕ ಚಾಲನೆ ನೀಡಿದರು ಎಂದು ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸುವುದರಿಂದ ಆಡಳಿತ ಮತ್ತು ನಿರ್ವಹಣೆ ಯಲ್ಲಿ ಸುಧಾರಣೆ, ಫಲಾನುಭವಿಗಳಿಗೆ ನೇರ ಪಾವತಿ ಮತ್ತು ಸಾರ್ವಜನಿಕ ನಿಧಿಯ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಸಾಧ್ಯವಾಗುತ್ತದೆ ಎಂದು ಸುಬೋಧ್‌ ಕುಮಾರ್ ಹೇಳಿದರು.

ನೋಡಲ್ ಅಧಿಕಾರಿ ಶಕೀಲ್ ಮಕ್ಬೂಲ್ ಅವರು ಲೆಕ್ಕಪತ್ರ ವ್ಯವಹಾರಗಳನ್ನು ಸುಧಾರಿಸುವಲ್ಲಿ ಪಿಎಫ್‌ಎಂಎಸ್‌ನ ಮಹತ್ವವನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT