ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು: ಶಂಕಿತ ಭಯೋತ್ಪಾದಕನ ಬಂಧನ, 5.5 ಕೆ.ಜಿ. ಸುಧಾರಿತ ಸ್ಫೋಟಕ ವಶ

ತಪ್ಪಿದ ದೊಡ್ದ ದುರಂತ
Last Updated 27 ಜೂನ್ 2021, 19:12 IST
ಅಕ್ಷರ ಗಾತ್ರ

ಜಮ್ಮು: ಶಂಕಿತ ಭಯೋತ್ಪಾದಕನೊಬ್ಬನನ್ನು ಭಾನುವಾರ ಇಲ್ಲಿನ ಬರ್ಮಿನಿ ರಸ್ತೆಯಲ್ಲಿ ಬಂಧಿಸಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಬಂಧಿತನಿಂದ 5.5 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಂಡಿದ್ದಾರೆ.

ಶಂಕಿತನನ್ನು ನದೀಂ–ಉಲ್‌– ಹಖ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್ ಎ ತಯಬಾ ಉಗ್ರ ಸಂಘಟನೆಯ ಜೊತೆಗೆ ನಂಟು ಹೊಂದಿರುವ ರೆಸಿಸ್ಟೆನ್ಸ್ರೆಸಿಸ್ಟೆನ್ಸ್ ಸಂಘಟನೆಗೆ ಸೇರಿದವನು ಎನ್ನಲಾಗಿದೆ.

‘ನದೀಂ ರಾಮ್‌ಬನ್‌ನ ಜೈನ್‌ಹಾಲ್-ಬನಿಹಾಲ್ ನಿವಾಸಿಯಾಗಿದ್ದು, ಈತನ ಬಂಧನದಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಈತ ಪಾಕಿಸ್ತಾನ ಹಾಗೂ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿರುವ ಸಂಘಟನೆಯ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ’ ಎಂದು ಜಮ್ಮುವಿನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ತಿಳಿಸಿದ್ದಾರೆ.

‘ಜನಸಂದಣಿ ಇರುವ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಸ್ಫೋಟಿಸುವ ಜವಾಬ್ದಾರಿಯನ್ನು ನದೀಂಗೆ ವಹಿಸಲಾಗಿತ್ತು. ಬರ್ಮಿನಿ ರಸ್ತೆಯಲ್ಲಿ ಪೊಲೀಸರು ದೈನಂದಿನ ತಪಾಸಣೆ ನಡೆಸುತ್ತಿದ್ದಾಗ ನದೀಂ ಹಳದಿ ಬ್ಯಾಗ್ ಹೊತ್ತು ಬಂಥಿಂಡಿ ಕಡೆಗೆ ಹೊರಟಿದ್ದ. ಪೊಲೀಸರನ್ನು ನೋಡುತ್ತಲೇ ನದೀಂ ಓಡಲು ಶುರುಮಾಡಿದ. ಅನುಮಾನ ಬಂದು ಆತನನ್ನು ಬೆನ್ನಟ್ಟಿ ಬಂಧಿಸಿದಾಗ ಸ್ಫೋಟಕದ ಸಂಚು ಬಯಲಾಯಿತು’ ಎಂದೂ ಕೊಹ್ಲಿ ವಿವರಿಸಿದ್ದಾರೆ.

‘ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ಪದಾರ್ಥಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ದೂರು ದಾಖಲಿಸಲಾಗಿದೆ. ನದೀಂನ ಬಂಧನದಿಂದಾಗಿ ದೊಡ್ಡದೊಂದು ದುರಂತ ತಪ್ಪಿದಂತಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT