ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಜೆಎನ್‌ಯು ಸೂಚನೆ

ನವದೆಹಲಿ: ಇಲ್ಲಿನ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್ ಆವರಣದಲ್ಲಿನ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ತನ್ನ ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವಂತೆ ವಿವಿಯು ಸೂಚಿಸಿದೆ.
ಎಲ್ಲ ಶಾಲೆಗಳು ಹಾಗೂ ಕೇಂದ್ರಗಳು ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರ ಹೊಂದಿರಬೇಕು ಎಂದೂ ಜೆಎನ್‌ಯು ಆಡಳಿತ ಸಲಹೆ ನೀಡಿದೆ.
ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್– 2 ರ ಕಟ್ಟಡದ ಗೋಡೆಗಳಲ್ಲಿ ಬ್ರಾಹ್ಮಣ ಹಾಗೂ ಬನಿಯಾ ವಿರೋಧಿ ಬರಹಗಳನ್ನು ಬರೆಯಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಬ್ರಾಹ್ಮಣ ಮತ್ತು ಬನಿಯಾ ಸಮುದಾಯಕ್ಕೆ ಸೇರಿದವರು ಕ್ಯಾಂಪಸ್ ಬಿಟ್ಟು ತೊಲಗಿ ಎಂದು ಗೋಡೆ ಮೇಲಿನ ಬರಹಗಳಲ್ಲಿ ಎಚ್ಚರಿಸಲಾಗಿತ್ತು.
ಇದನ್ನೂ ಓದಿ: ಜೆಎನ್‌ಯು ಕ್ಯಾಂಪಸ್ನಲ್ಲಿ ಬ್ರಾಹ್ಮಣ ವಿರೋಧಿ ಬರಹ: ತನಿಖೆಗೆ ಆದೇಶ
ಈ ಸಂಬಂಧ ವಿವಿಯ ಆಡಳಿತವು, ಭದ್ರತಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಆರು ಅಂಶಗಳ ಸಲಹೆಯನ್ನು ನೀಡಲಾಗಿದೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡದಂತೆ ಪ್ರತಿ ಕೇಂದ್ರದ ಸೂಕ್ತ ಸ್ಥಳದಲ್ಲಿ ಸೂಚನಾ ಫಲಕ ಹಾಕುವಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದೆ.
JNU की ये वही महिला प्राध्यापिका हैं जिन्हें लगभग 24 घंटे तक वामियों ने बंधक बनाया था और आज उन्हीं के कक्ष के बाहर लिखा है Go Back toशाखा
इससे ये तो साफ हो गया कि वामपंथी अब अपने ही फैलाए झूठ को समेटने लगे हैं और मानने लगे हैं कि महिलाएं भी शाखा जाती हैं और कोई भेदभाव नहीं हैं। pic.twitter.com/xMHU42nKlW— निधि त्रिपाठी நிதி திரிபாதி (@nidhitripathi92) December 1, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.