ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾಂಶ ರಕ್ಷಣೆ ಮಸೂದೆ: ಜೆಪಿಸಿ ವರದಿ ಸಲ್ಲಿಕೆಯ ಅವಧಿ ವಿಸ್ತರಣೆ

Last Updated 25 ಮಾರ್ಚ್ 2021, 10:53 IST
ಅಕ್ಷರ ಗಾತ್ರ

ನವದೆಹಲಿ: ವೈಯಕ್ತಿಕ ದತ್ತಾಂಶಗಳ ರಕ್ಷಣೆ ಮಸೂದೆ ಪರಿಶೀಲಿಸುವ ಜಂಟಿ ಸದನ ಸಮಿತಿಗೆ(ಜೆಪಿಸಿ) ತನ್ನ ವರದಿಯನ್ನು ಸಲ್ಲಿಸಲು ನೀಡಿದ್ದ ಗಡುವನ್ನು ಮುಂಗಾರು ಅಧಿವೇಶನದವರೆಗೆ ವಿಸ್ತರಿಸಲಾಗಿದೆ.

2019ರಲ್ಲಿ ಸದನ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ಬಜೆಟ್‌ ಅಧಿವೇಶನದಲ್ಲಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇತ್ತು.

ಆಡಳಿತಾರೂಢ ಬಿಜೆಪಿ ಪಕ್ಷದ ಮೀನಾಕ್ಷಿ ಲೇಖಿ ಅವರು ಲೋಕಸಭೆಯಲ್ಲಿ, ಜೆಪಿಸಿ ವರದಿ ಸಲ್ಲಿಸಲು ಮುಂಗಾರು ಅಧಿವೇಶನದವರೆಗೆ ಸಮಯ ವಿಸ್ತರಣೆ ಕುರಿತು ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT