ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಕುಸಿಯುತ್ತಿರುವ ಜೋಶಿಮಠದಲ್ಲಿ ಈಗ ಹಿಮಪಾತ

Last Updated 20 ಜನವರಿ 2023, 4:32 IST
ಅಕ್ಷರ ಗಾತ್ರ

ಜೋಶಿಮಠ: ಉತ್ತರಾಖಂಡದ ಕುಸಿಯುತ್ತಿರುವ ಪಟ್ಟಣ ಜೋಶಿಮಠದಲ್ಲಿ ಶುಕ್ರವಾರ ಈ ಋತುವಿನ ಮೊದಲ ಹಿಮಪಾತವಾಗಿದೆ. ಭೂಮಿ ಕುಸಿತದ ಮಧ್ಯೆ ಅಧಿಕಾರಿಗಳು ಮತ್ತು ನಿವಾಸಿಗಳು ಎದುರಿಸುತ್ತಿರುವ ಸವಾಲುಗಳಿಗೆ ಇದು ಹೊಸ ಸೇರ್ಪಡೆಯಾಗಿದೆ.

ಭೂಕುಸಿತದ ಪರಿಣಾ, ಹಲವು ಮನೆಗಳು ಮತ್ತು ಕಟ್ಟಡಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಜನರ ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಮಧ್ಯೆ, ಪಟ್ಟಣದ ಮನೆಗಳು ಮತ್ತು ಬೀದಿಗಳು ಹಿಮದಿಂದ ಆವೃತ್ತವಾಗಿರುವುದು ವಿಡಿಯೊಗಳಲ್ಲಿ ಕಂಡುಬಂದಿದೆ.

ಧನೊಲ್ಟಿ, ಕೇದಾರನಾಥ, ಮಸೂರಿ ಮತ್ತು ಪಿಥೋರ್‌ಗಢ ಜಿಲ್ಲೆಗಳಲ್ಲೂ ಹಿಮಪಾತವಾಗುತ್ತಿದ್ದು, ಹರಿದ್ವಾರ ಮತ್ತು ಉಧಮ್‌ಸಿಂಗ್ ನಗರಗಳಲ್ಲಿ ಶೀತ ಗಾಳಿ ಮುಂದುವರಿದಿದೆ.

ಇಂದು, 23 ಮತ್ತು 24ರಂದು ಜೋಶಿಮಠ, ಚಮೋಲಿ ಮತ್ತು ಪಿಥೋರ್‌ಗಢಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿತ್ತು.

ಜನವರಿ 2ರಂದು ಸಂಭವಿಸಿದ ಭೂಕುಸಿತದಿಂದ ಪಟ್ಟಣದ ಜನವಸತಿ ಪ್ರದೇಶದ ಕುಸಿಯುವಿಕೆ ವೇಗ ತೀವ್ರಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT