ಬುಧವಾರ, ಜೂನ್ 29, 2022
23 °C

ಪಕ್ಷದ ನಾಯಕರೊಂದಿಗೆ ನಡ್ಡಾ ಸಭೆ; ಕೋವಿಡ್, ಮುಂಬರುವ ಚುನಾವಣೆಗಳ ಬಗ್ಗೆ ಚರ್ಚೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಮೋರ್ಚಾ ಮುಖ್ಯಸ್ಥರುಗಳೊಂದಿಗೆ ಆಯೋಜಿಸಿರುವ ಎರಡು ದಿನಗಳ ಮಹತ್ವದ ಸಭೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆರಂಭಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಶಿವ ಪ್ರಕಾಶ್‌, ಅರುಣ್‌ ಸಿಂಘ್‌, ಸಿ.ಟಿ.ರವಿ, ಡಿ.ಪುರಂದೇಶ್ವರಿ, ದಿಲಿಪ್‌ ಸೈಕಿಯಾ, ದುಷ್ಯಂತ್‌ ಗೌತಮ್‌, ಕೈಲಾಶ್‌ ವಿಜಯವರ್ಗಿಯಾ ಮತ್ತು ಬುಪೇಂದ್ರ ಯಾದವ್‌ ಅವರು ಸಭೆಗೆ ಹಾಜರಾಗಿದ್ದಾರೆ.

2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಮತ್ತು ಸದ್ಯದ ಕೋವಿಡ್‌-19 ಸಂಕಷ್ಟದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಕ್ಷ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಅಂತಿಮಗೊಳಿಸುವುದು ಸಭೆಯ ಉದ್ದೇಶವಾಗಿದೆ.

ನಡ್ಡಾ ಅವರು ಶನಿವಾರ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಮೋರ್ಚಾ ಮುಖ್ಯಸ್ಥರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು