ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾದ 120ಕ್ಕೂ ಹೆಚ್ಚು ವಿಮಾನಗಳು ಕೇರಳದಲ್ಲಿ ಲ್ಯಾಂಡಿಂಗ್: ಸಿಂಧಿಯಾ

ಅಕ್ಷರ ಗಾತ್ರ

ನವದೆಹಲಿ:ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶ ತೀವ್ರಗೊಂಡಿದ್ದು, ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ಮುಂದುವರಿದಿದೆ.

ಈ ನಡುವೆ ಲಂಕಾದ 120ಕ್ಕೂ ಹೆಚ್ಚು ವಿಮಾನಗಳು ಭಾರತದಲ್ಲಿ ಲ್ಯಾಂಡಿಂಗ್ ಆಗಿವೆ ಎಂದು ನಾಗರಿಕ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ.

ಇದಕ್ಕೆ ಅನುವು ಮಾಡಿಕೊಟ್ಟಿರುವ ಕೇರಳದ ತಿರುವನಂತಪುರ ಹಾಗೂ ಕೊಚ್ಚಿ ವಿಮಾನ ನಿಲ್ದಾಣಗಳ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಇಂಧನ ತುಂಬುವ ನಿಟ್ಟಿನಲ್ಲಿ ಲಂಕಾದ ವಿಮಾನಗಳಿಗೆ ಭಾರತದಲ್ಲಿ ಲ್ಯಾಂಡಿಂಗ್ ಆಗಲು ಅವಕಾಶ ಮಾಡಿಕೊಡಲಾಗಿದೆ.

ತಿರುವನಂತಪುರ ಹಾಗೂ ಕೊಚ್ಚಿ ವಿಮಾನ ನಿಲ್ದಾಣಗಳು, 'ವಸುದೈವ ಕುಟುಂಬಕಂ' (ಇಡೀ ವಿಶ್ವವೇ ನಮ್ಮ ಕುಟುಂಬ) ಎಂಬ ಭಾರತದ ಪರಿಕಲ್ಪನೆಯನ್ನು ಪ್ರದರ್ಶಿಸಿದ್ದಕ್ಕೆ ಅಭಿನಂದನೆಗಳು! ಶ್ರೀಲಂಕಾಕ್ಕೆ ಹೋಗುವ 120ಕ್ಕೂ ಹೆಚ್ಚು ವಿಮಾನಗಳಿಗೆ ತಾಂತ್ರಿಕ ಲ್ಯಾಂಡಿಂಗ್ ಮಾಡಲು ಅನುಮತಿಸುವ ಮೂಲಕ ಕರ್ತವ್ಯವನ್ನು ಮೆರೆದಿದೆ. ನೆರೆಯ ದೇಶದೊಂದಿಗಿನ ಈ ಬಾಂಧವ್ಯದ ಸಂಕೇತವು ಮತ್ತಷ್ಟು ವೃದ್ಧಿಸಲಿದೆ ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT