ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ಮತ್ತೆ ಪ್ರಧಾನಿಯಾಗಿ ಕೆ.ಪಿ.ಶರ್ಮಾ ಒಲಿ ಪ್ರಮಾಣವಚನ

Last Updated 14 ಮೇ 2021, 10:08 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಪ್ರಧಾನಿಯಾಗಿ ಕೆ.ಪಿ.ಶರ್ಮಾ ಒಲಿ ಅವರು ಶುಕ್ರವಾರ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದರು.

ಇಲ್ಲಿನ ಶೀತಲ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷೆ ವಿದ್ಯಾದೇವಿ ಅವರು ಒಲಿ ಅವರಿಗೆ ಪ್ರಮಾಣವಚನ ಬೋಧಿಸಿದರು.

ಸೋಮವಾರವಷ್ಟೇ ಜನಪ್ರತಿನಿಧಿ ಸಭೆಯಲ್ಲಿ ನಡೆದ ವಿಶ್ವಾಸಮತದಲ್ಲಿ ಸಿಪಿನ್‌–ಯುಎಂಎಲ್‌ ಪಕ್ಷದ ಅಧ್ಯಕ್ಷ ಒಲಿ ಅವರು ಸೋಲು ಅನುಭವಿಸಿದ್ದರು. ಆದರೆ ಸಂಸತ್ತಿನಲ್ಲಿ ಬಹುಮತ ಗಳಿಸುವಷ್ಟು ಸ್ಥಾನಗಳನ್ನು ಪಡೆಯಲು ಇತರ ವಿರೋಧ ಪಕ್ಷಗಳು ವಿಫಲವಾದ ಕಾರಣ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರುಒಲಿ ಅವರನ್ನೇ ಪ್ರಧಾನಿಯನ್ನಾಗಿ ಗುರುವಾರ ರಾತ್ರಿ ಮರು ನೇಮಕ ಮಾಡಿದ್ದರು.

ಒಲಿ ಅವರು 30 ದಿನದೊಳಗೆ ವಿಶ್ವಾಸಮತ ಸಾಬೀತುಪಡಿಸಬೇಕಾಗುತ್ತದೆ. ಆ ಪ್ರಯತ್ನ ವಿಫಲವಾದಲ್ಲಿ, ಸಂವಿಧಾನದ 76(5) ವಿಧಿಯಡಿಯಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಿಸಲಾಗುತ್ತದೆ.

ಒಲಿ ಅವರು 2015ರ ಅಕ್ಟೋಬರ್‌ 11ರಿಂದ 2016ರ ಆಗಸ್ಟ್‌ 3ರವರೆಗೆ ಹಾಗೂ 2018ರ ಫೆಬ್ರುವರಿ 15ರಿಂದ 2021ರ ಮೇ 13ರವರೆಗೆ ಪ್ರಧಾನಿ ಸ್ಥಾನದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT