ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಆತ್ಮಹತ್ಯೆ: ಶವ ಸ್ವೀಕರಿಸಲು ಕುಟುಂಬ ಒಪ್ಪಿಗೆ 

Last Updated 22 ಜುಲೈ 2022, 15:50 IST
ಅಕ್ಷರ ಗಾತ್ರ

ಚೆನ್ನೈ:ಹಾಸ್ಟೆಲ್ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕಿಯ ಶವವನ್ನು ಶನಿವಾರ ಸ್ವೀಕರಿಸಲು ಆಕೆಯ ಕುಟುಂಬ ಒ‍ಪ್ಪಿಕೊಂಡಿದ್ದು, ಪುದುಚೇರಿಯ ಪ್ರತಿಷ್ಠಿತ ಜಿಪ್ಮರ್‌ನ ವೈದ್ಯರ ತಂಡಕ್ಕೆಶವಪರೀಕ್ಷೆ ವರದಿಯನ್ನು ವಿಶ್ಲೇಷಿಸಲು ಮದ್ರಾಸ್ ಹೈಕೋರ್ಟ್ ಹೇಳಿದೆ.

ಮತ್ತೊಂದು ಮರಣೋತ್ತರ ಪರೀಕ್ಷೆಯನ್ನು ಸಮಿತಿಯಿಂದ ನಡೆಸಬೇಕು ಎಂದು ಒತ್ತಾಯಿಸಿದ ತಂದೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಎನ್. ಸತೀಶ್ ಕುಮಾರ್ ತರಾಟೆಗೆ ತೆಗೆದುಕೊಂಡ ನಂತರ ಶವವನ್ನು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲು ಕುಟುಂಬ ನಿರ್ಧರಿಸಿತು. ಮತ್ತೊಂದು ಮರಣೋತ್ತರ ಪರೀಕ್ಷೆ ನಡೆಸಬೇಕೆಂಬ ಅರ್ಜಿದಾರರ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿ, ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿತು.

ಕಲ್ಲಾಕುರಿಚಿಯ ಶಾಲಾ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಬಾಲಕಿ, ಜುಲೈ 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮರಣ ಪತ್ರದಲ್ಲಿ ‘ಇಬ್ಬರು ಶಿಕ್ಷಕರು ತನಗೆ ಚಿತ್ರಹಿಂಸೆ ನೀಡಿದ್ದಾರೆ’ ಎಂದು ಆರೋಪಿಸಲಾಗಿತ್ತು. ಆಕೆ ದೇಹದಲ್ಲಿನ ಗಾಯದ ಗುರುತುಗಳ ಕುರಿತು ಮರಣೋತ್ತರ ವರದಿ ಉಲ್ಲೇಖಿಸಿಶಾಲೆಯ ಆಡಳಿತದ ವಿರುದ್ಧ ಕ್ರಮಕ್ಕೆ ಪೋಷಕರು ಒತ್ತಾಯಿಸಿದರು.

ಈಗಾಗಲೇಇಬ್ಬರು ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT