ಸೋಮವಾರ, ಏಪ್ರಿಲ್ 12, 2021
22 °C

ಅಭ್ಯರ್ಥಿಗಳ ಆಯ್ಕೆಗೆ ಕಮಲ್ ಹಾಸನ್ ಆನ್‌ಲೈನ್ ಅರ್ಜಿ ಆಹ್ವಾನ: ₹ 25,000 ಶುಲ್ಕ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ನಟ-ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ (ಎಂಎನ್‌ಎಂ) ಪಕ್ಷವು ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಪಕ್ಷದ ಸದಸ್ಯರಿಂದ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಲಿದೆ ಎಂದು ತಿಳಿಸಿದೆ.

ಫೆಬ್ರವರಿ 21 ರ ಭಾನುವಾರದಂದು ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಸಂಭಾವ್ಯ ಅಭ್ಯರ್ಥಿಗಳು ₹ 25 ಸಾವಿರ ಪಾವತಿಸಬೇಕು, ಪಕ್ಷೇತರ ಸದಸ್ಯರು ಸಹ ಅರ್ಜಿ ಸಲ್ಲಿಸಬಹುದು ಅಥವಾ ನಾಮನಿರ್ದೇಶನಗೊಳ್ಳಬಹುದು ಎಂದು ಪಕ್ಷ ಹೇಳಿದೆ.

ಮೇ ತಿಂಗಳಲ್ಲಿ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಕಳೆದ ತಿಂಗಳು ಬಲಗಾಲಿನ ಮೂಳೆ ಸೋಂಕಿಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಮಲ್ ಹಾಸನ್ ಸದ್ಯ ಚೇತರಿಸಿಕೊಳ್ಳುತ್ತಿದ್ದು, ತಮ್ಮ ಪಕ್ಷಕ್ಕೆ "ಬ್ಯಾಟರಿ ಟಾರ್ಚ್" ಚಿಹ್ನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಇದೇ ಚಿಹ್ನೆಯನ್ನು ಬಳಸಿತ್ತು. ಆ ಚುನಾವಣೆಯಲ್ಲಿ ಎಂಎನ್ಎಂ ಶೇಕಡಾ 3.77 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಕೆಲವು ನಗರ ಪ್ರದೇಶಗಳಲ್ಲಿ ಶೇ. 10 ರಷ್ಟು ಮತಗಳನ್ನು ಸಹ ಪಡೆದಿತ್ತು.

"ತಮಿಳುನಾಡಿನ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೆ ನಮಗೆ ಟಾರ್ಚ್‌ಲೈಟ್ ಚಿಹ್ನೆ ನೀಡಲಾಗಿದೆ" ಎಂದು ಕಮಲ್ ಹಾಸನ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಮುಂಬರುವ ಚುನಾವಣೆಗಳಿಗೆ ಚುನಾವಣಾ ಕಾರ್ಯತಂತ್ರಗಳನ್ನು ನಿರ್ಧರಿಸಲು ಎಂಎನ್‌ಎಂ ಪಕ್ಷದ "ಖಾಯಂ ಅಧ್ಯಕ್ಷ" ರಾಗಿರುವ ಕಮಲ್ ಹಾಸನ್‌ಗೆ ಅಧಿಕಾರ ನೀಡಲಾಗಿದೆ.

 

 

 

 

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.