ಸೋಮವಾರ, ಏಪ್ರಿಲ್ 12, 2021
31 °C

ಕಮಲ ಹಾಸನ್‌ ಕಾರಿನ ಮೇಲೆ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಾಂಚೀಪರಂ (ತಮಿಳುನಾಡು): ನಟ ಹಾಗೂ ಮಕ್ಕಳ ನೀಧಿ ಮಯಮ್ (ಎಂಎನ್‌ಎಂ) ಪಕ್ಷದ ನಾಯಕ ಕಮಲ ಹಾಸನ್‌
ಅವರ ಕಾರಿನ ಮೇಲೆ ಭಾನುವಾರ ರಾತ್ರಿ ಇಲ್ಲಿ ಯುವಕನೊಬ್ಬ ದಾಳಿ ನಡೆಸಿದ್ದಾನೆ.

ಚುನಾವಣಾ ಪ್ರಚಾರ ಮುಗಿಸಿ ಇಲ್ಲಿನ ಹೋಟೆಲ್‌ನತ್ತ ಬರುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಯಲ್ಲಿ ಕಮಲ ಹಾಸನ್‌ ಅವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿದೆ.‌

ಈ ಬಗ್ಗೆ ಪಕ್ಷದ ನಾಯಕ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಎ.ಜಿ.ಮೌರ್ಯ ಟ್ವೀಟ್‌ ಮಾಡಿದ್ದು, ಹಲ್ಲೆ ಯತ್ನವನ್ನು ಪೊಲೀಸರು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ, ಇಂತಹ ಶಕ್ತಿಗಳ ಬೆದರಿಕೆಗಳಿಗೆ ಪಕ್ಷ ಅಂಜುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು