ಮಂಗಳವಾರ, ಆಗಸ್ಟ್ 9, 2022
23 °C

ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಒಂದೇ ದಿನ ₹1 ಕೋಟಿ ಸಂಗ್ರಹ: ಕಪಿಲ್‌ ಮಿಶ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಹತ್ಯೆಗೊಳಗಾದ ಟೈಲರ್‌ ಕನ್ಹಯ್ಯ ಲಾಲ್‌ ಅವರ ಕುಟುಂಬಕ್ಕೆ ಕಳೆದ 24 ಗಂಟೆಯಲ್ಲಿ ₹1 ಕೋಟಿ ಹರಿದುಬಂದಿದೆ ಎಂದು ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಟ್ವೀಟ್‌ ಮಾಡಿದ್ದಾರೆ.

'ಕಣ್ಣೀರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು. ಜೈ ಶ್ರೀ ರಾಮ್‌' ಎಂದು ಕಪಿಲ್‌ ಮಿಸ್ರಾ  ಟ್ವೀಟ್‌ ಮಾಡಿದ್ದಾರೆ.

ಕನ್ಹಯ್ಯ ಲಾಲ್‌ ಅವರ ಕುಟುಂಬದ ಜೊತೆಗೆ ಹಿಂದೂಗಳೆಲ್ಲರೂ ನಿಂತಿದ್ದಾರೆ. ಕನ್ಹಯ್ಯ ಲಾಲ್‌ ಅವರನ್ನು ಕಾಪಾಡಲು ಹೋಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಈಶ್ವರ ಸಿಂಗ್‌ ಅವರಿಗೆ 25 ಲಕ್ಷ ಕೊಡುತ್ತೇವೆ ಎಂದು ಕಪಿಲ್‌ ಮಿಶ್ರಾ ಹೇಳಿದ್ದಾರೆ.

ಕ್ರೌಡ್ ಫಂಡಿಂಗ್ ಮೂಲಕ ಇದುವರೆಗೆ ಒಟ್ಟು ₹1.40 ಕೋಟಿ ಸಂಗ್ರಹಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು