ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸಂಗೀತ: ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈನಲ್ಲಿರುವ ‘ದಿ ಮ್ಯೂಸಿಕ್‌ ಅಕಾಡೆಮಿ ಮದ್ರಾಸ್‌’ ಸಂಸ್ಥೆಯು ಕರ್ನಾಟಕ ಸಂಗೀತದಲ್ಲಿ (ಗಾಯನ) ಅಡ್ವಾನ್ಸಡ್‌ ಡಿಪ್ಲೊಮಾ ಕೋರ್ಸ್‌ನ ಮೊದಲ ವರ್ಷಕ್ಕೆ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಇದು 3 ವರ್ಷಗಳ ಅವಧಿಯ ಕೋರ್ಸ್‌ ಆಗಿದ್ದು, ಪ್ರತಿ ವರ್ಷ ಎರಡು ಸೆಮಿಸ್ಟರ್‌ ಒಳಗೊಂಡಿರುತ್ತದೆ. ವಾರಕ್ಕೆ ಐದು ದಿನಗಳು (ಸೋಮವಾರದಿಂದ ಶುಕ್ರವಾರ) ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30 ರವರೆಗೆ ತರಗತಿಗಳು ನಡೆಯಲಿವೆ.

ಅರ್ಹತೆ: ಅರ್ಜಿದಾರರು 12ನೇ ತರಗತಿ ಉತ್ತೀರ್ಣರಾಗಿರಬೇಕು. 18ರಿಂದ 30 ವರ್ಷದೊಳಗಿರಬೇಕು. ವರ್ಣ, ಕೃತಿಗಳನ್ನು ಹಾಡುವ ಸಾಮರ್ಥ್ಯ ಹೊಂದಿರಬೇಕು. ಅರ್ಜಿದಾರರು ತಾವು ಪಡೆದಿರುವ ಸಂಗೀತ ತರಬೇತಿಯ ಮಾಹಿತಿಯೊಂದಿಗೆ ತಮ್ಮ ವ್ಯಕ್ತಿತ್ವ ವಿವರವನ್ನು ಇ–ಮೇಲ್‌ ಮೂಲಕ ಕಳುಹಿಸಬೇಕು.

ಇ–ಮೇಲ್‌ ವಿಳಾಸ:music@musicacademymadras.com;ritharajan@gmail.com;soomty@gmail.com. ಅರ್ಜಿ ಪರಿಶೀಲಿಸಿ, ಸಂದರ್ಶನ ನಡೆಸಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗೆ: 044 28112231 / 28115162.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT